ಶುಕ್ರವಾರ, ಜುಲೈ 1, 2022
24 °C

ಯಶಸ್ವಿ ನವೋದ್ಯಮ ಪಟ್ಟಿ: ಭಾರತಕ್ಕೆ ಮೂರನೇ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಯಶಸ್ವಿ ನವೋದ್ಯಮಗಳನ್ನು ಹೊಂದಿರುವ ಪ್ರಮುಖ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನ ಪಡೆದುಕೊಂಡಿದೆ.

ಭಾರತದಲ್ಲಿ 21 ಯಶಸ್ವಿ ನವೋದ್ಯಮಗಳಿವೆ. ಒನ್‌97 ಕಮ್ಯುನಿಕೇಷನ್‌, ಓಲಾ ಕ್ಯಾಬ್ಸ್‌, ಬೈಜೂಸ್‌ ಮತ್ತು ಓಯೊ ರೂಮ್ಸ್‌ ಪ್ರಮುಖವಾಗಿವೆ. ಹುರುನ್‌ ರಿಸರ್ಚ್‌ ಸಂಸ್ಥೆಯು 2019ರ ಹುರುನ್‌ ಗ್ಲೋಬಲ್‌ ಯುನಿಕಾರ್ನ್‌ ಪಟ್ಟಿಯಲ್ಲಿ ಈ ಮಾಹಿತಿ ನೀಡಿದೆ.

ಚೀನಾ (206) ಮತ್ತು ಅಮೆರಿಕ (203) ಮೊದಲೆರಡು ಸ್ಥಾನದಲ್ಲಿವೆ. ವಿಶ್ವದ ಶೇ 80ರಷ್ಟು ನವೋದ್ಯಮಗಳು ಚೀನಾದಲ್ಲಿಯೇ ಇವೆ.

ಹುರುನ್‌ ಸಂಸ್ಥೆಯು 25 ದೇಶಗಳ 118 ನಗರಗಳ 494 ನವೋದ್ಯಮಗಳ ಮಾಹಿತಿ ನೀಡಿದೆ.

‘ಹೊಸ ಪೀಳಿಗೆಯ ತಂತ್ರಜ್ಞಾನ ಬಳಕೆಯಲ್ಲಿ ಈ ನವೋದ್ಯಮಗಳು ಮುಂಚೂಣಿಯಲ್ಲಿವೆ’ ಎಂದು ಹುರುನ್‌ ವರದಿಯ ಅಧ್ಯಕ್ಷ ರೂಪರ್ಟ್‌ ಹುಗ್‌ವರ್ಫ್‌ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು