ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2024–25ನೇ ವರ್ಷಕ್ಕೆ ಐ.ಟಿ ರಿಟರ್ನ್ಸ್‌ ಅಧಿಸೂಚನೆ ಪ್ರಕಟ

Published 23 ಡಿಸೆಂಬರ್ 2023, 15:36 IST
Last Updated 23 ಡಿಸೆಂಬರ್ 2023, 15:36 IST
ಅಕ್ಷರ ಗಾತ್ರ

ನವದೆಹಲಿ: 2024–25ನೇ ಅಂದಾಜು ವರ್ಷಕ್ಕೆ ಆದಾಯ ತೆರಿಗೆ ಲೆಕ್ಕಪತ್ರದ ವಿವರ ಸಲ್ಲಿಕೆಗೆ (ಐ.ಟಿ ರಿಟರ್ನ್ಸ್‌) ಐಟಿಆರ್‌–1 (ಸಹಜ್‌) ಮತ್ತು ಐಟಿಆರ್‌–4 (ಸುಗಮ್‌) ಅರ್ಜಿ ನಮೂನೆಗಳ ಅಧಿಸೂಚನೆ ಹೊರಡಿಸಲಾಗಿದೆ.

₹50 ಲಕ್ಷದವರೆಗಿನ ಆದಾಯ ಇರುವವರಿಗೆ ಅನುಕೂಲ ಕಲ್ಪಿಸಲು ಆದಾಯ ತೆರಿಗೆ ಇಲಾಖೆಯು ಈ ಕ್ರಮವಹಿಸಿದೆ. ಈ ವರ್ಗದ ತೆರಿಗೆದಾರರು ಗಳಿಸಿರುವ ಆದಾಯದ ಆಧಾರದ ಮೇಲೆ (2023ರ ಏಪ್ರಿಲ್‌ನಿಂದ 2024ರ ಮಾರ್ಚ್‌ವರೆಗೆ) ರಿಟರ್ನ್ಸ್‌ ಸಲ್ಲಿಸಬಹುದು. 

ಸಾಮಾನ್ಯವಾಗಿ ಹಣಕಾಸು ವರ್ಷದ ಕೊನೆಯ ತಿಂಗಳಾದ ಮಾರ್ಚ್ ಅಥವಾ ಹೊಸ ಹಣಕಾಸು ವರ್ಷದ ಆರಂಭದ ತಿಂಗಳಾದ ಏಪ್ರಿಲ್‌ನಲ್ಲಿ ಅರ್ಜಿ ನಮೂನೆಗಳ ಅಧಿಸೂಚನೆ ಪ್ರಕಟಿಸುವುದು ವಾಡಿಕೆ.

ಆದರೆ, ಇಲಾಖೆಯು ಕಳೆದ ವರ್ಷದ ಫೆಬ್ರುವರಿಯಲ್ಲಿ ಐ.ಟಿ ರಿಟರ್ನ್ಸ್‌ ಅರ್ಜಿ ನಮೂನೆಯ ಅಧಿಸೂಚನೆ ಹೊರಡಿಸಿತ್ತು. ಈ ಬಾರಿ ತೆರಿಗೆದಾರರು ನಿಗದಿತ ಗಡುವಿಗೆ ಮುಂಚಿತವಾಗಿಯೇ ರಿಟರ್ನ್ಸ್‌ ಸಲ್ಲಿಸಲು ಅನುಕೂಲವಾಗಲೆಂದು ಡಿಸೆಂಬರ್‌ನಲ್ಲಿಯೇ ಪ್ರಕಟಿಸಿದೆ.  

ಹೆಚ್ಚಿನ ಸಂಖ್ಯೆಯಲ್ಲಿ ಸಣ್ಣ ಮತ್ತು ಮಧ್ಯಮ ಗಾತ್ರದ ತೆರಿಗೆದಾರರು ಈ ಎರಡು ಅರ್ಜಿ ನಮೂನೆಗಳನ್ನು ಬಳಸುತ್ತಾರೆ.

ವಾರ್ಷಿಕ ₹50 ಲಕ್ಷದವರೆಗೆ ಒಟ್ಟು ಆದಾಯ ಹೊಂದಿದವರು, ಒಂದು ಮನೆ ಆಸ್ತಿ, ಬಡ್ಡಿ ಸೇರಿದಂತೆ ಇತರೆ ವರಮಾನ ಮತ್ತು ₹5 ಸಾವಿರದವರೆಗೆ ಕೃಷಿ ಆದಾಯ ಹೊಂದಿದವರು ಐಟಿಆರ್‌–1 ಸಲ್ಲಿಸಬೇಕಿದೆ. 

ವಾರ್ಷಿಕ ₹50 ಲಕ್ಷದವರೆಗೆ ವರಮಾನ ಹೊಂದಿದ ವ್ಯಕ್ತಿಗಳು, ಅವಿಭಕ್ತ ಕುಟುಂಬಗಳು, ಸಂಸ್ಥೆಗಳ ವಹಿವಾಟು ಹಾಗೂ ವೃತ್ತಿಯಿಂದ ಊಹಾತ್ಮಕ ಆದಾಯ ಹೊಂದಿದವವರು ಐಟಿಆರ್‌–4 ಸಲ್ಲಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT