ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ್ಡಿ ದರ ಹೆಚ್ಚಿಸಿದ ಐಸಿಐಸಿಐ ಬ್ಯಾಂಕ್

Last Updated 1 ಆಗಸ್ಟ್ 2022, 10:50 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಎರಡನೆಯ ಅತಿದೊಡ್ಡ ಖಾಸಗಿ ಬ್ಯಾಂಕ್ ಆಗಿರುವ ಐಸಿಐಸಿಐ ಬ್ಯಾಂಕ್, ಸಾಲದ ಮೇಲಿನ ಬಡ್ಡಿ ದರವನ್ನು ಸೋಮವಾರ ಶೇಕಡ 0.15ರಷ್ಟು ಹೆಚ್ಚಿಸಿದೆ.

ಎಂಸಿಎಲ್‌ಆರ್ ಆಧಾರಿತ ಎಲ್ಲ ಅವಧಿಯ ಸಾಲಗಳ ಮೇಲಿನ ಬಡ್ಡಿ ದರದಲ್ಲಿ ಏರಿಕೆ ಆಗಿದೆ. ಇದರಿಂದಾಗಿ ಸಾಲದ ತಿಂಗಳ ಕಂತುಗಳ ಮೊತ್ತ ಹೆಚ್ಚಾಗಲಿದೆ. ಬಡ್ಡಿ ದರ ಏರಿಕೆಯು ಹೊಸ ಗ್ರಾಹಕರಿಗೆ ಸೋಮವಾರದಿಂದ ಅನ್ವಯವಾಗಲಿದೆ. ಹಾಲಿ ಗ್ರಾಹಕರಿಗೆ ಶುಕ್ರವಾರದಿಂದ ಅನ್ವಯವಾಗಲಿದೆ.

ಇನ್ನು ಮುಂದೆ ಒಂದು ವರ್ಷದ ಅವಧಿಯ, ಎಂಸಿಎಲ್‌ಆರ್ ಆಧಾರಿತ ಸಾಲದ ಮೇಲಿನ ಬಡ್ಡಿ ದರವು ಶೇಕಡ 7.90ರಷ್ಟಾಗಲಿದೆ. ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಈ ವಾರ ರೆಪೊ ದರ ಹೆಚ್ಚಿಸಲಿದೆ ಎಂಬ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT