ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಐಸಿಐ ಬ್ಯಾಂಕ್‌ ಲಾಭ ಶೇ 17ರಷ್ಟು ಹೆಚ್ಚಳ

Last Updated 30 ಜನವರಿ 2021, 11:26 IST
ಅಕ್ಷರ ಗಾತ್ರ

ಮುಂಬೈ: ಐಸಿಐಸಿಐ ಬ್ಯಾಂಕ್‌ನ ನಿವ್ವಳ ಲಾಭ ಅಕ್ಟೋಬರ್‌–ಡಿಸೆಂಬರ್‌ ತ್ರೈಮಾಸಿಕದಲ್ಲಿ ಶೇ 17.73ರಷ್ಟು ಹೆಚ್ಚಾಗಿದ್ದು ₹ 5,498 ಕೋಟಿಗಳಿಗೆ ತಲುಪಿದೆ.

ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹ 4,670 ಕೋಟಿ ನಿವ್ವಳ ಲಾಭ ಗಳಸಿತ್ತು.

ಒಟ್ಟಾರೆ ವರಮಾನ ₹ 23,638 ಕೋಟಿಗಳಿಂದ ₹ 24,416 ಕೋಟಿಗಳಿಗೆ ಏರಿಕೆಯಾಗಿದೆ. ಒಟ್ಟಾರೆ ವೆಚ್ಚವು ₹ 17,089 ಕೋಟಿಗಳಿಂದ ₹ 15,596 ಕೋಟಿಗಳಿಗೆ ಇಳಿಕೆ ಕಂಡಿದೆ.

ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ನಷ್ಟ ಭರಿಸಲು ತೆಗೆದಿರಿಸುವ ಮೊತ್ತವು ₹ 2,741 ಕೋಟಿಗಳಷ್ಟಾಗಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ₹ 2,083 ಕೋಟಿಗಳಷ್ಟಿತ್ತು ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.

ಬಂಡವಾಳ ಲಭ್ಯತೆ ಪ್ರಮಾಣವು ಡಿಸೆಂಬರ್ 31ರ ಅಂತ್ಯಕ್ಕೆ ಶೇ 18.04ರಷ್ಟಿದೆ ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT