ಬುಧವಾರ, ಮಾರ್ಚ್ 3, 2021
31 °C

ಇಸ್ಕೊ ಸ್ಥಾವರದ ಉತ್ಪಾದನೆ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಭಾರತೀಯ ಉಕ್ಕು ಪ್ರಾಧಿಕಾರದ ಅಂಗ ಸಂಸ್ಥೆಯಾಗಿರುವ ಇಂಡಿಯನ್‌ ಐರನ್‌ ಆ್ಯಂಡ್‌ ಸ್ಟೀಲ್‌ ಕಂಪನಿಯ (ಐಐಎಸ್‌ಸಿಒ) ಬರ್ನಾಪುರ ಸ್ಥಾವರದಲ್ಲಿ ಈ ವರ್ಷದ ಮೊದಲ ತ್ರೈಮಾಸಿಕದ ಉತ್ಪಾದನೆಯು ಹೆಚ್ಚಳಗೊಂಡಿದೆ.

‘ಹಿಂದಿನ ವರ್ಷಕ್ಕೆ ಹೋಲಿಸಿದರೆ ಒಟ್ಟಾರೆ ಉತ್ಪಾದನೆಯು ಶೇ 2.4ರಷ್ಟು ಹೆಚ್ಚಳಗೊಂಡಿದೆ. ಸ್ಥಾವರದಿಂದ ಒಟ್ಟು 4.66 ಲಕ್ಷ ಟನ್‌ ಉಕ್ಕು ಹೊರಗೆ ಸಾಗಿಸಲಾಗಿದೆ. ಇದರಲ್ಲಿ 1.14 ಲಕ್ಷ ಟನ್‌ ರಫ್ತು ಮಾಡಲಾಗಿದೆ’ ಎಂದು ಸಿಇಒ ಎ. ವಿ. ಕಮಲಾಕರ್‌ ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಗೆ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಉತ್ಪಾದನೆ ಮತ್ತು ಗುಣಮಟ್ಟ
ಹೆಚ್ಚಳಕ್ಕೆ ಉದ್ಯಮ ಸಂಪನ್ಮೂಲ ಯೋಜನೆ (ಇಆರ್‌ಪಿ) ಅಳವಡಿಸಿಕೊಳ್ಳಲಾಗುತ್ತಿದೆ’ ಎಂದಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು