ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಬೆಳವಣಿಗೆ ಅಂದಾಜು ತಗ್ಗಿಸಿದ ಐಎಂಎಫ್‌

Last Updated 11 ಅಕ್ಟೋಬರ್ 2022, 15:31 IST
ಅಕ್ಷರ ಗಾತ್ರ

ವಾಷಿಂಗ್ಟನ್: 2022ರಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಅಂದಾಜನ್ನು ತಗ್ಗಿಸಿರುವ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್), ದೇಶದ ಜಿಡಿಪಿ (ಒಟ್ಟು ಆಂತರಿಕ ಉತ್ಪಾದನೆ) ಬೆಳವಣಿಗೆ ದರವು ಶೇಕಡ 6.8ರಷ್ಟು ಇರಲಿದೆ ಎಂದು ಹೇಳಿದೆ. ಜಿಡಿಪಿ ಬೆಳವಣಿಗೆಯು ಶೇ 7.4ರಷ್ಟು ಇರಲಿದೆ ಎಂದು ಐಎಂಎಫ್‌ ಜುಲೈನಲ್ಲಿ ಅಂದಾಜಿಸಿತ್ತು.

2021–22ನೆಯ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ಶೇ 8.7ರಷ್ಟು ಬೆಳವಣಿಗೆ ಕಂಡಿದೆ. ಐಎಂಎಫ್ ತನ್ನ ವಾರ್ಷಿಕ ಜಾಗತಿಕ ಆರ್ಥಿಕ ಮುನ್ನೋಟ ವರದಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ.

ಜಾಗತಿಕ ಆರ್ಥಿಕ ಬೆಳವಣಿಗೆ ದರವು 2022ರಲ್ಲಿ ಶೇ 3.2ಕ್ಕೆ ಇಳಿಕೆಯಾಗಲಿದೆ. 2023ರಲ್ಲಿ ಇದು ಶೇ 2.7ಕ್ಕೆ ತಲುಪಲಿದೆ. ಪ್ರಸಕ್ತ ವರ್ಷದ ಮೊದಲಾರ್ಧದಲ್ಲಿ ಅಮೆರಿಕದಲ್ಲಿ ಕುಸಿತ ದಾಖಲಾಗಲಿದೆ, ದ್ವಿತೀಯಾರ್ಧದಲ್ಲಿ ಯೂರೊ ವಲಯದಲ್ಲಿ ಕುಸಿತ ಕಂಡುಬರಲಿದೆ ಎಂದು ವರದಿ ಹೇಳಿದೆ.

‘ಅತಿಕೆಟ್ಟ ದಿನಗಳು ಇನ್ನಷ್ಟೇ ಬರಬೇಕಿದೆ. ಹಲವರ ಪಾಲಿಗೆ 2023ನೆಯ ಇಸವಿಯು ಆರ್ಥಿಕ ಹಿಂಜರಿತದ ಅನುಭವ ನೀಡಲಿದೆ’ ಎಂದು ವರದಿಯು ಹೇಳಿದೆ. 2023ರಲ್ಲಿ ಜಗತ್ತಿನ ಮೂರನೆಯ ಒಂದಕ್ಕಿಂತ ಹೆಚ್ಚಿನ ಅರ್ಥ ವ್ಯವಸ್ಥೆಗಳು ಆರ್ಥಿಕವಾಗಿ ಕುಸಿತ ಕಾಣಲಿವೆ. ವಿಶ್ವದ ಅತಿದೊಡ್ಡ ಅರ್ಥ ವ್ಯವಸ್ಥೆಗಳಾದ ಅಮೆರಿಕ, ಐರೋಪ್ಯ ಒಕ್ಕೂಟ ಮತ್ತು ಚೀನಾದ ಬೆಳವಣಿಗೆ ಸ್ಥಗಿತವಾಗಲಿದೆ ಎಂದು ಅದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT