ವಾಷಿಂಗ್ಟನ್: ಮೈಸೂರಿನವರಾದ ಗೀತಾ ಗೋಪಿನಾಥ್ (47) ಅವರು, ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್) ಮುಖ್ಯ ಆರ್ಥಿಕ ತಜ್ಞೆಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

‘ಐಎಂಎಫ್’ನ ಈ ಉನ್ನತ ಹುದ್ದೆಗೆ ಏರಿದ ಮೊದಲ ಮಹಿಳೆ ಮತ್ತು ಈ ಹುದ್ದೆ ನಿರ್ವಹಿಸಲಿರುವ ಭಾರತದ ಎರಡನೇ ಅರ್ಥಶಾಸ್ತ್ರಜ್ಞರು ಎಂಬ ಹೆಗ್ಗಳಿಕೆ ಇವರದ್ದಾಗಿದೆ. ಆರ್‌ಬಿಐನ ಮಾಜಿ ಗವರ್ನರ್ ರಘುರಾಂ ರಾಜನ್ ಅವರು ಇದಕ್ಕೂ ಮೊದಲು ಈ ಹುದ್ದೆ ಅಲಂಕರಿಸಿದ್ದರು. ‘ಐಎಂಎಫ್’ನ 11ನೆ ಮುಖ್ಯ ಆರ್ಥಿಕತಜ್ಞೆಯಾಗಿ ಇವರು ಸೇವೆ ಸಲ್ಲಿಸಲಿದ್ದಾರೆ.

ಡಿಸೆಂಬರ್ 31ರಂದು ಸೇವಾ ನಿವೃತ್ತರಾಗಿರುವ ನಿಧಿಯ ಸಂಶೋಧನಾ ವಿಭಾಗದ ನಿರ್ದೇಶಕ ಮತ್ತು ಆರ್ಥಿಕ ಸಲಹೆಗಾರರಾಗಿದ್ದ ಮೌರೈಸ್ ಆಬ್ಸ್ಟ್‌ಫೆಲ್ಡ್ ಅವರ ಉತ್ತರಾಧಿಕಾರಿಯಾಗಿ ಗೀತಾ ಅವರು ಕಾರ್ಯನಿರ್ವಹಿಸಲಿದ್ದಾರೆ.

‘ಐಎಂಎಫ್’ನ ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಿನ್ ಲಗಾರ್ಡ್ ಅವರು ಗೀತಾ ಅವರನ್ನು ಈ ಹುದ್ದೆಗೆ ನೇಮಿಸಿ ಹಿಂದಿನ ವರ್ಷದ ಅಕ್ಟೋಬರ್ 1ರಂದು ಆದೇಶ ಹೊರಡಿಸಿದ್ದರು.

ಗೀತಾ ಅವರು ಇತ್ತೀಚೆಗೆ ಹಾರ್ವರ್ಡ್ ಗೆಜೆಟ್‌ಗೆ ನೀಡಿರುವ ಸಂದರ್ಶನದಲ್ಲಿ, ‘ಐಎಂಎಫ್ ಮುಖ್ಯಸ್ಥೆ ಲಗಾರ್ಡ್ ಅವರದ್ದು ಅದ್ಭುತ ವ್ಯಕ್ತಿತ್ವ. ಐಎಂಎಫ್ ಮುನ್ನಡೆಸುವಲ್ಲಿನ ನಾಯಕತ್ವಕ್ಕಷ್ಟೇ ಈ ವರ್ಚಸ್ವಿ ವ್ಯಕ್ತಿತ್ವ ಸೀಮಿತವಾಗಿಲ್ಲ. ವಿಶ್ವದಾದ್ಯಂತ ಮಹಿಳೆಯರ ಪಾಲಿಗೆ ಅವರೊಬ್ಬ ಆದರ್ಶ ವ್ಯಕ್ತಿಯೂ ಆಗಿದ್ದಾರೆ’ ಎಂದು ಬಣ್ಣಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.