ಭಾನುವಾರ, ಸೆಪ್ಟೆಂಬರ್ 22, 2019
22 °C

ಆನ್‌ಲೈನ್‌ ಐಟಿಆರ್‌ ಇಳಿಕೆ

Published:
Updated:

ನವದೆಹಲಿ: ಇದೇ ಮೊದಲ ಬಾರಿಗೆ 2018–19ರಲ್ಲಿ ಆನ್‌ಲೈನ್‌ ಮುಲಕ ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಸುವವರ (ಇ–ಫೈಲಿಂಗ್) ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದಿದೆ ಎಂದು ಆದಾಯ ತೆರಿಗೆ ಇಲಾಖೆ ಮಾಹಿತಿ ನೀಡಿದೆ.

2017–18ನೇ ಹಣಕಾಸು ವರ್ಷದಲ್ಲಿ ಇ–ಫೈಲಿಂಗ್‌ ಸಲ್ಲಿಕೆ ಪ್ರಮಾಣವು 6.74 ಕೋಟಿ ಇತ್ತು. ಇದು 2018–19ನೇ ಹಣಕಾಸು ವರ್ಷದಲ್ಲಿ 6.68 ಕೋಟಿಗೆ ಇಳಿಕೆಯಾಗಿದೆ ಎಂದು ತಿಳಿಸಿದೆ.

ಆದರೆ, ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಸುವವರ ನೋಂದಣಿಯಲ್ಲಿ
ಶೇ 15ರಷ್ಟು ಹೆಚ್ಚಾಗಿದ್ದು, 8.45 ಕೋಟಿಗೆ ತಲುಪಿದೆ. 2013ರ ಮಾರ್ಚ್‌ ಅಂತ್ಯಕ್ಕೆ ಇದು 2.7 ಕೋಟಿ ಇತ್ತು.

Post Comments (+)