ಶುಕ್ರವಾರ, ಜನವರಿ 17, 2020
20 °C

ಎಂಎಫ್‌ ನಿರ್ವಹಣಾ ಸಂಪತ್ತು ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಮ್ಯೂಚುವಲ್‌ ಫಂಡ್‌ ಸಂಸ್ಥೆಗಳ ನಿರ್ವಹಣಾ ಸಂಪತ್ತಿನ ಮೌಲ್ಯವು ನವೆಂಬರ್‌ ಅಂತ್ಯಕ್ಕೆ  ₹ 27.04 ಲಕ್ಷ ಕೋಟಿಗೆ ಏರಿಕೆಯಾಗಿದೆ.

ಬ್ಯಾಂಕಿಂಗ್‌ ಮತ್ತು ಕೇಂದ್ರೋದ್ಯಮಗಳ ನಿಧಿಗಳನ್ನೂ ಒಳಗೊಂಡು ಸಾಲಪತ್ರಗಳಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ
ಯಾಗಿದೆ. ಇದರಿಂದಾಗಿ ಉದ್ಯಮದ ನಿರ್ವಹಣಾ ಸಂಪತ್ತು ಹೆಚ್ಚಾಗಿದೆ.

44 ಸಂಸ್ಥೆಗಳ ಸಂಪತ್ತು ಮೌಲ್ಯವು ಅಕ್ಟೋಬರ್‌ ಅಂತ್ಯಕ್ಕೆ ₹ 26.33 ಲಕ್ಷ ಕೋಟಿಗಳಷ್ಟಿತ್ತು ಎಂದು ಭಾರತೀಯ ಮ್ಯೂಚುವಲ್‌ ಫಂಡ್ ಸಂಸ್ಥೆಗಳ ಒಕ್ಕೂಟವು (ಎಎಂಎಫ್‌ಐ) ಮಾಹಿತಿ ನೀಡಿದೆ.

ಹೂಡಿಕೆದಾರರು ಲಾಭ ಗಳಿಕೆಗೆ ಮುಂದಾಗಿದ್ದರಿಂದ ನವೆಂಬರ್‌ನಲ್ಲಿ ಷೇರು ಸಂಪರ್ಕಿತ ಮ್ಯೂಚುವಲ್‌ ಫಂಡ್‌ಗಳಲ್ಲಿ ಹೂಡಿಕೆ ಇಳಿಕೆಯಾಗಿದೆ.

ವ್ಯವಸ್ಥಿತ ಹೂಡಿಕೆ ಯೋಜನೆಯ (ಸಿಪ್‌) ಮೂಲಕ ಚಿಲ್ಲರೆ ಹೂಡಿಕೆ ಹೆಚ್ಚಾಗುತ್ತಿದೆ. ‘ಸಿಪ್‌’ನ ನಿರ್ವಹಣಾ ಸಂಪತ್ತು ಮೌಲ್ಯ ₹ 3.12 ಲಕ್ಷ ಕೋಟಿಗಳಷ್ಟು ಗರಿಷ್ಠ ಮಟ್ಟದಲ್ಲಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು