ಕೆಬಿಎಲ್: ಅಮೃತ ಸಮೃದ್ಧಿ ಯೋಜನೆ
ಮಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕರ್ಣಾಟಕ ಬ್ಯಾಂಕ್, ‘ಕೆಬಿಎಲ್- ಅಮೃತ ಸಮೃದ್ಧಿ’ ಎಂಬ ಠೇವಣಿ ಯೋಜನೆಯನ್ನು ಘೋಷಿಸಿದೆ.
ಇದು 75 ವಾರಗಳ (525 ದಿನಗಳು) ಠೇವಣಿ ಯೋಜನೆಯಾಗಿದ್ದು, ವಾರ್ಷಿಕ ಶೇಕಡ 6.1ರಷ್ಟು ಬಡ್ಡಿ ಇರುತ್ತದೆ ಎಂದು ಬ್ಯಾಂಕ್‌ನ ಪ್ರಕಟಣೆ ತಿಳಿಸಿದೆ.
‘ಕೆಬಿಎಲ್- ಅಮೃತ ಸಮೃದ್ಧಿ’ ಯೋಜನೆಯನ್ನು ಬಿಡುಗಡೆ ಮಾಡಿದ ಬ್ಯಾಂಕಿನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ ಎಂ.ಎಸ್. ಅವರು, ‘ಕರ್ಣಾಟಕ ಬ್ಯಾಂಕ್ ದೇಶಭಕ್ತಿಯ ಸಮೃದ್ಧ ಪರಂಪರೆ ಹಾಗೂ ಮೌಲ್ಯಗಳನ್ನು ಪ್ರತಿಬಿಂಬಿಸುತ್ತಾ ಅದರ ಪೋಷಣೆಗೆ ಮುಂಚೂಣಿಯಲ್ಲಿರುತ್ತದೆ. ಸೀಮಿತ ಅವಧಿಗಾಗಿ ಇರುವ ಈ ಯೋಜನೆಯ ಪ್ರಯೋಜನವನ್ನು ಹೆಚ್ಚಿನ ಗ್ರಾಹಕರು ಪಡೆಯಬೇಕು’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.