ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್‌, ಫ್ರಾನ್ಸ್‌ ಹಿಂದಿಕ್ಕಿದ ಭಾರತ: ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆ

Last Updated 17 ಫೆಬ್ರುವರಿ 2020, 20:00 IST
ಅಕ್ಷರ ಗಾತ್ರ

ನವದೆಹಲಿ: ಭಾರತವು ಈಗ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆ ದೇಶವಾಗಿ ಹೊರಹೊಮ್ಮಿದೆ.

ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ)ಲೆಕ್ಕದಲ್ಲಿ ಇಂಗ್ಲೆಂಡ್‌ ಮತ್ತು ಫ್ರಾನ್ಸ್‌ಗಳನ್ನು ಹಿಂದಿಕ್ಕಿದೆ ಎಂದು ಅಮೆರಿಕದ ಚಿಂತಕರ ಚಾವಡಿಯಾಗಿರುವ ‘ವರ್ಲ್ಡ್‌ ಪಾಪುಲೇಷನ್‌ ರಿವ್ಯೂ’ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದೊಂದು ಸ್ವತಂತ್ರ ಸಂಘಟನೆಯಾಗಿದ್ದು, ಯಾವುದೇ ಪಕ್ಷದ ಪ್ರಭಾವಕ್ಕೆ ಒಳಗಾಗಿಲ್ಲ.

ಭಾರತ ಈಗ ಮುಕ್ತ ಆರ್ಥಿಕತೆಯಾಗುವತ್ತ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ₹ 208.74 ಲಕ್ಷ ಕೋಟಿ ಮೊತ್ತದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಹೊಂದಿರುವ ಭಾರತವು ಇಂಗ್ಲೆಂಡ್‌ (₹ 200 ಲಕ್ಷ ಕೋಟಿ) ಮತ್ತು ಫ್ರಾನ್ಸ್‌ (₹ 192 ಲಕ್ಷ ಕೋಟಿ) ಆರ್ಥಿಕತೆಗಳನ್ನು ಹಿಂದಿಕ್ಕಿದೆ.

ಭಾರತದ ನಿಜವಾದ ಜಿಡಿಪಿ ಬೆಳವಣಿಗೆಯು ಸತತ ಮೂರನೇ ವರ್ಷವೂ (ಶೇ 7.5 ರಿಂದ ಶೇ 5ಕ್ಕೆ) ಮಂದಗತಿಯಲ್ಲಿ ಇದೆ. ಆದರೆ, ಕರೆನ್ಸಿಗಳ ಖರೀದಿ ಸಾಮರ್ಥ್ಯ ಆಧಾರದಲ್ಲಿ ಭಾರತದ ಜಿಡಿಪಿಯು (₹ 735.7 ಲಕ್ಷ ಕೋಟಿ) ಜಪಾನ್‌ ಮತ್ತು ಜರ್ಮನಿಗಳಿಗಿಂತ ಹೆಚ್ಚಿಗೆ ಇದೆ. ಬೇರೆ, ಬೇರೆ ದೇಶಗಳ ಜಿಡಿಪಿ ಹೋಲಿಸಲು ನಿರ್ದಿಷ್ಟ ಸರಕುಗಳನ್ನು ಖರೀದಿಸುವ ಆಯಾ ದೇಶಗಳ ಕರೆನ್ಸಿಗಳ ಸಾಮರ್ಥ್ಯವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿದೆ.

ಭಾರತದಲ್ಲಿ 1990ರ ದಶಕದಲ್ಲಿ ಆರಂಭವಾದ ಆರ್ಥಿಕ ಉದಾರೀಕರಣದಿಂದಾಗಿ ವಿದೇಶ ವ್ಯಾಪಾರ ಮತ್ತು ಹೂಡಿಕೆ ಮೇಲಿನ ತಗ್ಗಿದ ನಿಯಂತ್ರಣ ಕ್ರಮಗಳು, ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಖಾಸಗೀಕರಣ ಕ್ರಮಗಳಿಂದಾಗಿ ಆರ್ಥಿಕ ಬೆಳವಣಿಗೆ ವೇಗವು ಗಮನಾರ್ಹವಾಗಿ ಹೆಚ್ಚಿದೆ.

ಭಾರತದ ಆರ್ಥಿಕತೆಯಲ್ಲಿ ಶೇ 60ರಷ್ಟು ಪಾಲು ಹೊಂದಿರುವ ಸೇವಾ ವಲಯವು ಅತ್ಯಂತ ತ್ವರಿತ ರೀತಿಯಲ್ಲಿ ಪ್ರಗತಿ ದಾಖಲಿಸುತ್ತಿದೆ. ತಯಾರಿಕೆ ಮತ್ತು ಕೃಷಿ ವಲಯಗಳೂ ಆರ್ಥಿಕತೆಯ ಪ್ರಮುಖ ಭಾಗಗಳಾಗಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT