ವಾಷಿಂಗ್ಟನ್: ಕೋವಿಡ್–19 ಪಿಡುಗು ಹಾಗೂ ದೇಶದಾದ್ಯಂತ ವಿಧಿಸಲಾಗಿದ್ದ ಲಾಕ್ಡೌನ್ ಪರಿಣಾಮ ಕುಸಿದಿದ್ದ ಭಾರತದ ಆರ್ಥಿಕತೆ ಆಶ್ಚರ್ಯಕರವಾಗಿ ಪುಟಿದೆದ್ದಿದೆ. ಆದರೆ, ಸಂಕಷ್ಟದಿಂದ ಇನ್ನೂ ಪಾರಾಗಿಲ್ಲ ಎಂದು ವಿಶ್ವಬ್ಯಾಂಕ್ ಅಭಿಪ್ರಾಯಪಟ್ಟಿದೆ.

ವಿಶ್ವ ಬ್ಯಾಂಕ್ ಬಿಡುಗಡೆ ಮಾಡಿರುವ ‘ಸೌತ್ ಏಷ್ಯಾ ಎಕನಾಮಿಕ್ ಫೋಕಸ್’ ಎಂಬ ವರದಿಯಲ್ಲಿ ಈ ವಿಷಯ ಪ್ರಸ್ತಾಪಿಸಲಾಗಿದ್ದು, 2021–22ನೇ ಸಾಲಿನಲ್ಲಿ ಭಾರತದ ಜಿಡಿಪಿ ಪ್ರಗತಿ ದರ ಶೇ 7.5 ರಿಂದ ಶೇ 12.5ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ.

2017–18ನೇ ಹಣಕಾಸು ವರ್ಷದಲ್ಲಿ ಜಿಡಿಪಿ ಪ್ರಗತಿ ದರ ಶೇ 8.3 ತಲುಪಿತ್ತು. ಆದರೆ, ಕೋವಿಡ್–19 ವ್ಯಾಪಕಗೊಂಡ ವರ್ಷದಲ್ಲಿ ಇದು ಶೇ 4ಕ್ಕೆ ಕುಸಿಯಿತು ಎಂದೂ ವರದಿಯಲ್ಲಿ ವಿವರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.