ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸೆಂಬರ್‌ಗೆ ದೇಶೀಯ ಚಿಪ್‌ ಲಭ್ಯ: ಸಚಿವ ಅಶ್ವಿನಿ ವೈಷ್ಣವ್‌

ಕೇಂದ್ರ ಸಂವಹನ ಸಚಿವ ಅಶ್ವಿನಿ ವೈಷ್ಣವ್‌ ಹೇಳಿಕೆ
Published 19 ಜನವರಿ 2024, 15:44 IST
Last Updated 19 ಜನವರಿ 2024, 15:44 IST
ಅಕ್ಷರ ಗಾತ್ರ

ದಾವೋಸ್‌ (ಪಿಟಿಐ): ‘ಕೇಂದ್ರ ಸರ್ಕಾರವು 2022ರ ಜನವರಿಯಲ್ಲಿ ಸೆಮಿಕಂಡಕ್ಟರ್‌ ನೀತಿಯನ್ನು ಅನುಷ್ಠಾನಗೊಳಿಸಿದ ಬಳಿಕ ಚಿಪ್‌ಗಳ ತಯಾರಿಕೆಗೆ ವೇಗ ಸಿಕ್ಕಿದೆ. ಡಿಸೆಂಬರ್‌ ವೇಳೆಗೆ ದೇಶದಲ್ಲಿಯೇ ಸೆಮಿಕಂಡಕ್ಟರ್ ಚಿಪ್‌ ತಯಾರಿಕೆ ಆಗುವ ನಿರೀಕ್ಷೆಯಿದೆ’ ಎಂದು ಕೇಂದ್ರ ಸಂವಹನ ಮತ್ತು ಐ.ಟಿ. ಸಚಿವ ಅಶ್ವಿನಿ ವೈಷ್ಣವ್‌ ಹೇಳಿದ್ದಾರೆ.

ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯಲ್ಲಿ ಪಾಲ್ಗೊಂಡಿರುವ ಅವರು, ಶುಕ್ರವಾರ ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಈ ಮಾಹಿತಿ ಹಂಚಿಕೊಂಡರು.

‘ಸಭೆಯಲ್ಲಿ ಪಾಲ್ಗೊಂಡಿರುವ ಸೆಮಿಕಂಡಕ್ಟರ್‌ ತಯಾರಿಕಾ ಕೈಗಾರಿಕೆಗಳ ಹಿರಿಯ ಪ್ರತಿನಿಧಿಗಳೊಟ್ಟಿಗೆ ಚರ್ಚಿಸಿದ್ದೇನೆ. ಭಾರತದಲ್ಲಿ ಇಷ್ಟು ಕಡಿಮೆ ಅವಧಿಯಲ್ಲಿ ಈ ವಲಯವು ಸಾಧಿಸುತ್ತಿರುವ ಬೆಳವಣಿಗೆ ಬಗ್ಗೆ ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಜತೆಗೆ, ಸರ್ಕಾರದ ನೀತಿ ಬಗ್ಗೆಯೂ ಮೆಚ್ಚುಗೆ ಸೂಚಿಸಿದ್ದಾರೆ’ ಎಂದರು.

ಗುಜರಾತ್‌ನಲ್ಲಿ ಅಮೆರಿಕದ ಮೈಕ್ರಾನ್‌ ಕಂಪನಿಯು ಸೆಮಿಕಂಡಕ್ಟರ್‌ ಚಿಪ್ ಘಟಕ ಸ್ಥಾಪನೆ ಸಂಬಂಧ 2023ರ ಜೂನ್‌ನಲ್ಲಿ ಒಪ್ಪಂದಕ್ಕೆ ಸಹಿ ಹಾಕಿತು. ತ್ವರಿತವಾಗಿ ಭೂಮಿ ಹಂಚಿಕೆ, ಫ್ಯಾಕ್ಟರಿ ವಿನ್ಯಾಸದ ಕೆಲಸ ಮತ್ತು ತೆರಿಗೆಗೆ ಸಂಬಂಧಿಸಿದ ಒಪ್ಪಂದ ಪೂರ್ಣ ಗೊಂಡಿದ್ದರಿಂದ ಅದೇ ವರ್ಷದ ಸೆಪ್ಟೆಂಬರ್‌ನಿಂದಲೇ ಕೆಲಸ ಆರಂಭಿಸಿದೆ ಎಂದರು.

‘ಸೆಮಿಕಂಡಕ್ಟರ್‌ ಚಿಪ್‌ಗಳ ತಯಾರಿಕಾ ಕೌಶಲಕ್ಕೆ ಪೂರಕ ವ್ಯವಸ್ಥೆ ರೂಪಿಸಬೇಕು ಎಂಬುದು ಪ್ರಧಾನಿ ಮೋದಿ ಅವರ ಆಶಯ‌ವಾಗಿದೆ. ಈ ನಿಟ್ಟಿನಲ್ಲಿ 104 ವಿಶ್ವವಿದ್ಯಾಲಯಗಳ ಜೊತೆಗೆ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕುವ ಪ್ರಕ್ರಿಯೆ ನಡೆಯುತ್ತಿದೆ. ಚಿಪ್‌ಗಳ ವಿನ್ಯಾಸ, ಕೌಶಲಕ್ಕೆ ಸಂಬಂಧಿಸಿದಂತೆ ವಿ.ವಿ ಕೋರ್ಸ್‌ಗಳ ಪಠ್ಯಕ್ರಮದಲ್ಲಿಯೂ ಪರಿಷ್ಕರಣೆಯಾಗಲಿದೆ’ ಎಂದು ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT