ಬರ್ಲಿನ್ / ನವದೆಹಲಿ: ‘ಭಾರತವು ಆತುರವಾಗಿ ಅಥವಾ ನಮ್ಮ ತಲೆಗೆ ಬಂದೂಕು ಇಟ್ಟು ಬೆದರಿಸಿದ ಮಾತ್ರಕ್ಕೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದಿಲ್ಲ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ.

ಭಾರತವು ಯುರೋಪಿಯನ್ ಒಕ್ಕೂಟ, ಅಮೆರಿಕ ಸೇರಿದಂತೆ ವಿವಿಧ ದೇಶಗಳೊಂದಿಗೆ ವ್ಯಾಪಾರ ಒಪ್ಪಂದಗಳ ಕುರಿತು ಸಕ್ರಿಯವಾಗಿ ಮಾತುಕತೆ ನಡೆಸುತ್ತಿದೆ. ಆತುರದಲ್ಲಿ ನಾವು ಒಪ್ಪಂದಗಳನ್ನು ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಮತ್ತು ಹೂಡಿಕೆಗಳನ್ನು ಹೆಚ್ಚಿಸಲು ಬರ್ಲಿನ್ಗೆ ಭೇಟಿ ನೀಡಿರುವ ಗೋಯಲ್ ಅವರು, ವ್ಯಾಪಾರ ಒಪ್ಪಂದವನ್ನು ದೀರ್ಘಾವಧಿಯ ದೃಷ್ಟಿಕೋನದಿಂದ ನೋಡಬೇಕು. ಭಾರತ ಎಂದಿಗೂ ಆತುರದಲ್ಲಿ ಅಥವಾ ಆತುರದ ಸಮಯದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಹೆಚ್ಚಿನ ಸುಂಕಗಳನ್ನು ಎದುರಿಸಲು ಭಾರತವು ಹೊಸ ಮಾರುಕಟ್ಟೆಗಳನ್ನು ನೋಡುತ್ತಿದೆ ಎಂದು ಹೇಳಿದ್ದಾರೆ.

ಭಾರತವು, ಅಲ್ಪಾವಧಿಗೆ ಸಂಬಂಧಿಸಿದ ವ್ಯಾಪಾರ ಒಪ್ಪಂದದ ಮಾತುಕತೆಯ ಬಗ್ಗೆ ನೋಡುವುದಿಲ್ಲ. ವ್ಯಾಪಾರ ಒಪ್ಪಂದಗಳು ದೀರ್ಘಾವಧಿಯದ್ದಾಗಿರುತ್ತವೆ. ಇದು ಕೇವಲ ಸುಂಕ ಅಥವಾ ಸರಕು ಮತ್ತು ಸೇವೆಗಳಿಗೆ ಮಾತ್ರ ಸಂಬಂಧಿಸಿದ್ದಲ್ಲ. ಇದು ನಂಬಿಕೆ ಮತ್ತು ಸಂಬಂಧದ ಬಗ್ಗೆಯೂ ಆಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.