ಭಾನುವಾರ, ಮಾರ್ಚ್ 29, 2020
19 °C

ಸುಲಲಿತ ವಹಿವಾಟು; ಜಿಗಿದ ಭಾರತದ ಶ್ರೇಯಾಂಕ

ಪಿಟಿಐ Updated:

ಅಕ್ಷರ ಗಾತ್ರ : | |

ಸುಲಲಿತ ಉದ್ದಿಮೆ ವಹಿವಾಟು

ವಾಷಿಂಗ್ಟನ್‌: ವಿಶ್ವಬ್ಯಾಂಕ್‌ ‍ಪ್ರಕಟಿಸಿರುವ ಸುಲಲಿತ ಉದ್ದಿಮೆ ವಹಿವಾಟಿನ ಜಾಗತಿಕ ಶ್ರೇಯಾಂಕದಲ್ಲಿ ಭಾರತ 63ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ ಭಾರತದ ಶ್ರೇಯಾಂಕವು 14 ಸ್ಥಾನ ಹೆಚ್ಚಳಗೊಂಡಿದೆ. ಸತತ ಮೂರನೇ ವರ್ಷವೂ ಭಾರತದ ಶ್ರೇಯಾಂಕದಲ್ಲಿ ಗಮನಾರ್ಹ ಸುಧಾರಣೆ ಕಂಡು ಬಂದಿದೆ. 190 ದೇಶಗಳ ಪಟ್ಟಿಯಲ್ಲಿ ಹಿಂದಿನ ವರ್ಷ ಭಾರತ 77ನೇ ಸ್ಥಾನದಲ್ಲಿತ್ತು. ಪ್ರಸಕ್ತ ವರ್ಷ ಭಾರತದ ಶ್ರೇಯಾಂಕದಲ್ಲಿ ಗಮನಾರ್ಹ ಸುಧಾರಣೆ ಕಂಡು ಬರುವುದಕ್ಕೆ ಹಣಕಾಸು ನಷ್ಟ ಮತ್ತು ದಿವಾಳಿ ಸಂಹಿತೆಯನ್ನು (ಐಬಿಸಿ) ಯಶಸ್ವಿಯಾಗಿ ಜಾರಿಗೊಳಿಸಿದ್ದೇ ಮುಖ್ಯ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಜಾಗತಿಕ ಆರ್ಥಿಕತೆಯಲ್ಲಿನ ಮಂದಗತಿಯ ಪ್ರಗತಿಯ ಫಲವಾಗಿ ಭಾರತದ ಆರ್ಥಿಕ ವೃದ್ಧಿ ದರವೂ (ಜಿಡಿಪಿ) ಕುಂಠಿತಗೊಳ್ಳಲಿದೆ ಎಂದು ವಿವಿಧ ಹಣಕಾಸು ಸಂಸ್ಥೆಗಳು ಅಂದಾಜಿಸಿರುವ ಸಂದರ್ಭದಲ್ಲಿಯೇ ಈ ಶ್ರೇಯಾಂಕ ಹೆಚ್ಚಳದ ಉತ್ತೇಜಕರ ಸುದ್ದಿ ಪ್ರಕಟಗೊಂಡಿದೆ.

ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ವಿವಿಧ ಆರ್ಥಿಕ ಸುಧಾರಣಾ ಕ್ರಮಗಳನ್ನು ವಿಶ್ವಬ್ಯಾಂಕ್‌ ವರದಿಯಲ್ಲಿ ಶ್ಲಾಘಿಸಲಾಗಿದೆ. ಕಳೆದ 20 ವರ್ಷಗಳಲ್ಲಿ ಕೆಲವೇ ಕೆಲ ದೇಶಗಳು ಸಾಧಿಸಿದ ಯಶಸ್ಸನ್ನು ಭಾರತವೂ ಸಾಧ್ಯಮಾಡಿ ತೋರಿಸಿದೆ. ಅಪಾರ ಜನಸಂಖ್ಯೆ, ವಿಶಾಲ ಭೂ ಪ್ರದೇಶ ಹೊಂದಿರುವ ಭಾರತದಂತಹ ದೇಶವು ಇಂತಹ ಸಾಧನೆ ಮಾಡಿರುವುದು ಕಳೆದ 20 ವರ್ಷಗಳಲ್ಲಿಯೇ ಇದೇ ಮೊದಲು ಎಂದು ವಿಶ್ವಬ್ಯಾಂಕ್‌ ಶ್ಲಾಘಿಸಿದೆ. 'ಭಾರತದಲ್ಲಿಯೇ ತಯಾರಿಸಿ' ಆಂದೋಲನವು ವಿದೇಶಿ ಬಂಡವಾಳವನ್ನು ಆಕರ್ಷಿಸಿದೆ. ಇದು ಖಾಸಗಿ ವಲಯ ಅದರಲ್ಲೂ ತಯಾರಿಕಾ ಕ್ಷೇತ್ರದಲ್ಲಿ ಭಾರತದ ಸ್ಪರ್ಧಾತ್ಮಕತೆ ಹೆಚ್ಚಿಸಿದೆ’ ಎಂದು ವಿಶ್ವಬ್ಯಾಂಕ್‌ ಬಣ್ಣಿಸಿದೆ.

2020ರ ವೇಳೆಗೆ ಭಾರತವು ಮುಂಚೂಣಿ 50 ದೇಶಗಳ ಸಾಲಿನಲ್ಲಿ ಇರಬೇಕು ಎಂದು ಕೇಂದ್ರ ಸರ್ಕಾರ ಗುರಿ ನಿಗದಿಪಡಿಸಿದೆ.

ದೇಶ- ಶ್ರೇಯಾಂಕ

ನ್ಯೂಜೆಲೆಂಡ್‌-1

ಸಿಂಗಪುರ-2

ಹಾಂಗ್‌ಕಾಂಗ್‌-3

ದಕ್ಷಿಣ ಕೊರಿಯಾ-5

ಅಮೆರಿಕ-6

ಚೀನಾ-31

ಭಾರತ-63

ಪಾಕಿಸ್ತಾನ-108

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು