ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟಕ್‌ ಬ್ಯಾಂಕ್‌ ಲಾಭ ಶೇ 67ರಷ್ಟು ಹೆಚ್ಚಳ

Published 22 ಜುಲೈ 2023, 12:58 IST
Last Updated 22 ಜುಲೈ 2023, 12:58 IST
ಅಕ್ಷರ ಗಾತ್ರ

ಮುಂಬೈ: ಕೋಟಕ್ ಮಹೀಂದ್ರ ಬ್ಯಾಂಕ್‌ನ ನಿವ್ವಳ ಲಾಭವು ಪ್ರಸಕ್ತ ಹಣಕಾಸು ವರ್ಷದ ಜೂನ್‌ ತ್ರೈಮಾಸಿಕದಲ್ಲಿ ಶೇ 67ರಷ್ಟು ಹೆಚ್ಚಾಗಿದ್ದು ₹3,452 ಕೋಟಿಗೆ ತಲುಪಿದೆ.

ರಿಫಿನಿಟಿವ್‌ ಸಂಸ್ಥೆಯ ಮಾಹಿತಿಯ ಪ್ರಕಾರ, ಬ್ಯಾಂಕ್‌ನ ಲಾಭವು ₹3,240 ಕೋಟಿ ಆಗಲಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಂದಾಜು ಮಾಡಿದ್ದರು. ಅದನ್ನೂ ಮೀರಿ ಬ್ಯಾಂಕ್‌ ಲಾಭ ಗಳಿಸಿದೆ.

ನಿವ್ವ ಬಡ್ಡಿ ವರಮಾನ ಹೆಚ್ಚಾಗಿರುವುದು ಮತ್ತು ಸಾಲ ನೀಡಿಕೆಯಲ್ಲಿ ಉತ್ತಮ ಪ್ರಗತಿ ಕಂಡಿರುವುದೇ ಲಾಭದಲ್ಲಿ ಈ ಪ್ರಮಾಣದ ಏರಿಕೆಗೆ ಕಾರಣ ಎಂದು ಬ್ಯಾಂಕ್‌ ಹೇಳಿದೆ.

ನಿವ್ವಳ ಬಡ್ಡಿ ವರಮಾನವು ಶೇ 33ರಷ್ಟು ಹೆಚ್ಚಾಗಿ ₹6,234 ಕೋಟಿಗೆ ತಲುಪಿದೆ. ಮುಂಗಡ ಶೇ 19ರಷ್ಟು ಬೆಳವಣಿಗೆ ಕಂಡಿದ್ದು ₹3.37 ಲಕ್ಷ ಕೋಟಿಗೆ ತಲುಪಿದೆ.

ವಸೂಲಾಗದ ಸಾಲದ ಸರಾಸರಿ ಪ್ರಮಾಣವು (ಜಿಎನ್‌ಪಿಎ) ಶೇ 2.24 ರಿಂದ ಶೇ 1.77ಕ್ಕೆ ಇಳಿಕೆ ಕಂಡಿದೆ. ನಿವ್ವಳ ಎನ್‌ಪಿಎ ಶೇ 0.62 ರಿಂದ ಶೇ 0.40ಕ್ಕೆ ಇಳಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT