ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುತಿ ಸುಜುಕಿಯ ಈ 2 ಮಾದರಿಗಳಲ್ಲಿ ದೋಷ: 16 ಸಾವಿರ ಕಾರುಗಳ ರಿಕಾಲ್

Published 22 ಮಾರ್ಚ್ 2024, 13:08 IST
Last Updated 22 ಮಾರ್ಚ್ 2024, 13:08 IST
ಅಕ್ಷರ ಗಾತ್ರ

ಬೆಂಗಳೂರು: ಮಾರುತಿ ಸುಜುಕಿಯ ಎರಡು ಮಾದರಿಯ ಕಾರುಗಳಲ್ಲಿ ಫ್ಯೂಯಲ್ ಪಂಪ್ ಸಮಸ್ಯೆ ಕಾಣಿಸಿಕೊಂಡಿದ್ದು, ಇದನ್ನು ಪರಿಹರಿಸಲು 16 ಸಾವಿರ ಕಾರುಗಳ ರಿಕಾಲ್‌ಗೆ ಕಂಪನಿ ನಿರ್ಧರಿಸಿದೆ.

ದೇಶದ ಮುಂಚೂಣಿ ಕಾರು ತಯಾರಿಕಾ ಕಂಪನಿಯಾದ ಮಾರುತಿ ಸುಜುಕಿಯ ಬಲೆನೊ ಮಾದರಿಯ 11,851 ಹಾಗೂ ವ್ಯಾಗನ್‌ಆರ್‌ನ 4,190 ಕಾರುಗಳಲ್ಲಿ ಇಂಧನ ಪಂಪ್ ಮೋಟಾರಿನಲ್ಲಿ ದೋಷ ಕಂಡುಬಂದಿತ್ತು. ಈ ಕಾರುಗಳು 2019ರ ಜುಲೈನಿಂದ ನವೆಂಬರ್ ಅವಧಿಯಲ್ಲಿ ತಯಾರಾಗಿದ್ದಾಗಿವೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಕಂಪನಿ, ‘ನಿರ್ದಿಷ್ಟ ಅವಧಿಯಲ್ಲಿ ತಯಾರಾದ ಬಲೆನೊ ಮತ್ತು ವ್ಯಾಗನ್‌ ಆರ್ ಕಾರುಗಳಲ್ಲಿನ ಫ್ಯೂಯಲ್ ಪಂಪ್ ಮೋಟಾರುಗಳಲ್ಲಿ ದೋಷ ಇರುವ ಸಾಧ್ಯತೆ ಇದೆ. ಈ ಸಮಸ್ಯೆ ಇದ್ದಲ್ಲಿ ಎಂಜಿನ್ ಬಂದ್ ಆಗುವ ಅಥವಾ ಸ್ಟಾರ್ಟ್ ಆಗುವಲ್ಲಿ ಸಮಸ್ಯೆ ಎದುರಾಗಬಹುದು’ ಎಂದು ಮಾರುತಿ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT