ಬುಧವಾರ, ಸೆಪ್ಟೆಂಬರ್ 29, 2021
20 °C

ಚೇತರಿಕೆಯ ಹಾದಿಗೆ ಮರಳಿದ ತಯಾರಿಕಾ ವಲಯ: ಐಎಚ್‌ಎಸ್‌ ಮರ್ಕಿಟ್‌ ಇಂಡಿಯಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದ ತಯಾರಿಕಾ ವಲಯದ ಚಟುವಟಿಕೆಗಳು ಆಗಸ್ಟ್‌ನಲ್ಲಿ ಚೇತರಿಕೆಯ ಹಾದಿಗೆ ಮರಳಿವೆ ಎಂದು ಐಎಚ್‌ಎಸ್‌ ಮರ್ಕಿಟ್‌ ಇಂಡಿಯಾ ಸಂಸ್ಥೆ ತಿಳಿಸಿದೆ.

ಅನ್‌ಲಾಕ್‌ ಪ್ರಕ್ರಿಯೆ ಆರಂಭವಾಗಿರುವುದರಿಂದ ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿವೆ. ಗ್ರಾಹಕರ ಬೇಡಿಕೆಯಲ್ಲಿಯೂ ಸುಧಾರಣೆ ಕಂಡುಬಂದಿದೆ. ಹೀಗಾಗಿ ತಯಾರಿಕೆ ಹೆಚ್ಚಾಗಿದೆ ಎಂದು ವಿವರಿಸಿದೆ.

ತಯಾರಿಕಾ ವಲಯದ ಚಟುವಟಿಕೆಯನ್ನು ಸೂಚಿಸುವ, ಮ್ಯಾನುಫ್ಯಾಕ್ಟರಿಂಗ್‌ ಪರ್ಚೇಸಿಂಗ್‌ ಮ್ಯಾನೇಜರ್ಸ್‌ ಇಂಡೆಕ್ಸ್‌ (ಪಿಎಂಐ) ಜುಲೈನಲ್ಲಿ 46 ಇದ್ದಿದ್ದು ಆಗಸ್ಟ್‌ನಲ್ಲಿ 52ಕ್ಕೆ ಏರಿಕೆಯಾಗಿದೆ. ನಾಲ್ಕು ತಿಂಗಳ ಇಳಿಮುಖ ಬೆಳವಣಿಗೆಯಿಂದ ಹೊರಬಂದಿರುವ ಸೂಚನೆ ಇದಾಗಿದೆ ಎಂದು ಹೇಳಿದೆ.

32 ತಿಂಗಳವರೆಗಿನ ಸಕಾರಾತ್ಮಕ ಬೆಳವಣಿಗೆಯ ಬಳಿಕ ಏಪ್ರಿಲ್‌ನಲ್ಲಿ ಇಳಿಕೆ ಹಾದಿ ಹಿಡಿಯಲು ಆರಂಭಿಸಿತು. ಏಪ್ರಿಲ್‌ನಿಂದ ಜುಲೈ ಅವಧಿಯವರೆಗೂ ವಲಯದ ಬೆಳವಣಿಗೆ ಇಳಿಮುಖವಾಗಿಯೇ ಇತ್ತು.

ಸರಕುಗಳ ಸಾಗಣೆ ಪ್ರಕ್ರಿಯೆ ಸುಗಮವಾಗಿ ಇಲ್ಲದೇ ಇರುವುದರಿಂದ ಕಚ್ಚಾ ಸಾಮಗ್ರಿಗಳ ದರ ಹೆಚ್ಚಾಗಿದೆ. ಇದರಿಂದಾಗಿ ತಯಾರಿಕಾ ವೆಚ್ಚವು ಆಗಸ್ಟ್‌ನಲ್ಲಿ ಏರಿಕೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು