ಮಂಗಳವಾರ, ಸೆಪ್ಟೆಂಬರ್ 28, 2021
21 °C

ಬ್ಯಾಂಕಿಂಗ್‌ ಮುನ್ನೋಟ ಸ್ಥಿರ: ಇಂಡಿಯಾ ರೇಟಿಂಗ್ಸ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಇಂಡಿಯಾ ರೇಟಿಂಗ್ಸ್‌ ಆ್ಯಂಡ್‌ ರಿಸರ್ಚ್‌ ಸಂಸ್ಥೆಯು ದೇಶದ ಬ್ಯಾಂಕಿಂಗ್ ವಲಯದ ಮುನ್ನೋಟವನ್ನು ಪರಿಷ್ಕರಿಸಿದೆ. 2021–22ನೇ ಹಣಕಾಸು ವರ್ಷದಲ್ಲಿ ಬ್ಯಾಂಕಿಂಗ್‌ ವಲಯದ ಮುನ್ನೋಟವು ಸ್ಥಿರವಾಗಿರಲಿದೆ ಎಂದು ಹೇಳಿದೆ. ನಕಾರಾತ್ಮಕ ಆಗಿರಲಿದೆ ಎಂದು ಸಂಸ್ಥೆ ಈ ಹಿಂದೆ ಹೇಳಿತ್ತು.

ವಸೂಲಾಗದ ಸಾಲದ (ಎನ್‌ಪಿಎ) ಸರಾಸರಿ ಪ್ರಮಾಣವು ಶೇ 30ರಷ್ಟು ಹೆಚ್ಚಾಗುವ ಅಂದಾಜು ಮಾಡಿದೆ. ರಿಟೇಲ್‌ ವಲಯದ ಎನ್‌ಪಿಎ 2020–21ರ ದ್ವಿತೀಯಾರ್ಧದಲ್ಲಿ ಶೇ 1.7ರಷ್ಟು ಹೆಚ್ಚಾಗಿದೆ.

‘ಆಧಾರವಿಲ್ಲದೇ ಮುಂಗಡ ಸಾಲ ನೀಡುತ್ತಿರುವುದರಿಂದ ರಿಟೇಲ್‌ ಎನ್‌ಪಿಎ ಹೆಚ್ಚಾಗುತ್ತಿದೆ. ರೈತರು ಆಧಾರವಿಲ್ಲದೇ ಖಾಸಗಿ ಬ್ಯಾಂಕ್‌ಗಳಿಂದ ಹೆಚ್ಚು ಸಾಲ ಪಡೆಯುತ್ತಿದ್ದಾರೆ. ಹೀಗಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಿಗಿಂತಲೂ ಖಾಸಗಿ ಬ್ಯಾಂಕ್‌ಗಳಲ್ಲಿ ರಿಟೇಲ್‌ ಎನ್‌ಪಿಎ ಗರಿಷ್ಠ ಮಟ್ಟದಲ್ಲಿದೆ’ ಎಂದು ಸಂಸ್ಥೆಯ ನಿರ್ದೇಶಕ ಜಿಂದಾಲ್‌ ಹರಿಯಾ ಹೇಳಿದ್ದಾರೆ.

‘ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ರಿಟೇಲ್‌ ಎನ್‌ಪಿಎ ಶೇ 2.1ರಿಂದ ಶೇ 2.9ಕ್ಕೆ ಏರಿಕೆಯಾಗಲಿದ್ದು, ಖಾಸಗಿ ಬ್ಯಾಂಕ್‌ಗಳ ರಿಟೇಲ್‌ ಎನ್‌ಪಿಎ ಶೇ 1.2ರಿಂದ ಶೇ 4.3ಕ್ಕೆ ಏರಿಕೆ ಕಾಣಲಿದೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು