ಭಾನುವಾರ, ಆಗಸ್ಟ್ 14, 2022
28 °C

ಭಾರತದ ಮ್ಯೂಚುವಲ್‌ ಫಂಡ್‌ ಉದ್ದಿಮೆಗೆ ಅತ್ಯುತ್ತಮ ಶ್ರೇಯಾಂಕ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತ ಮತ್ತು ಅಮೆರಿಕದ ಮ್ಯೂಚುವಲ್‌ ಫಂಡ್‌ ಉದ್ಯಮಕ್ಕೆ ‘ಅತ್ಯುತ್ತಮ’ ಶ್ರೇಯಾಂಕ ದೊರೆತಿದೆ. ಹೂಡಿಕೆಯ ವಿವರಗಳನ್ನು ಸರಿಯಾಗಿ ಬಹಿರಂಗಪಡಿಸುವುದು, ಶುಲ್ಕ ಎಷ್ಟೆಂಬುದನ್ನು ತಿಳಿಸುವುದು ಹಾಗೂ ಫಂಡ್‌ನ ಹೂಡಿಕೆಗಳು ಎಲ್ಲೆಲ್ಲಿ ಇವೆ ಎಂಬುದನ್ನು ಪಾರದರ್ಶಕವಾಗಿ ತಿಳಿಸುವ ವಿಭಾಗಗಳಲ್ಲಿ ಈ ಶ್ರೇಯಾಂಕ ಸಿಕ್ಕಿದೆ. ಮಾರ್ನಿಂಗ್‌ಸ್ಟಾರ್‌ ಸಂಸ್ಥೆಯು ಜಾಗತಿಕ ಮಟ್ಟದಲ್ಲಿ ಅಧ್ಯಯನ ನಡೆಸಿ ಈ ಶ್ರೇಯಾಂಕ ನೀಡಿದೆ.

ಹೂಡಿಕೆದಾರರ ಹಣವನ್ನು ನಿರ್ವಹಿಸುವವರ ಹೆಸರು, ಅವರಿಗೆ ನೀಡುವ ಸಂಭಾವನೆ ಇತ್ಯಾದಿಗಳನ್ನು ಬಹಿರಂಗಪಡಿಸುವ ವಿಚಾರದಲ್ಲಿ ಜಾಗತಿಕ ಮಟ್ಟದಲ್ಲಿ ಭಾರತ ಮತ್ತು ಅಮೆರಿಕದ ಮ್ಯೂಚುವಲ್‌ ಫಂಡ್‌ ಉದ್ದಿಮೆಗಳು ಅತ್ಯುತ್ತಮವಾಗಿವೆ ಎಂದು ವರದಿ ಹೇಳಿದೆ. ಉತ್ತರ ಅಮೆರಿಕ, ಯುರೋಪ್, ಏಷ್ಯಾ ಮತ್ತು ಆಫ್ರಿಕಾದ ಒಟ್ಟು 26 ಮಾರುಕಟ್ಟೆಗಳಲ್ಲಿ ಮ್ಯೂಚುವಲ್‌ ಫಂಡ್‌ ಮೂಲಕ ಹೂಡಿಕೆ ಮಾಡಿರುವವರ ಅನುಭವಗಳನ್ನು ಆಧರಿಸಿ ಈ ವರದಿ ಸಿದ್ಧಪಡಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.