ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ನೌಕರರ ಸಂಖ್ಯೆ ಅರ್ಧದಷ್ಟು ಕಡಿತ ಮಾಡಿದ ಮಹೀಂದ್ರ

Last Updated 13 ಜನವರಿ 2021, 19:30 IST
ಅಕ್ಷರ ಗಾತ್ರ

ಚೆನ್ನೈ/ನವದೆಹಲಿ/ಡೆಟ್ರಾಯ್ಟ್‌: ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯು ಉತ್ತರ ಅಮರಿಕದಲ್ಲಿ ಇರುವ ತನ್ನ ಘಟಕದಲ್ಲಿ ಕೆಲಸ ಮಾಡುವ ಶೇಕಡ 50ಕ್ಕಿಂತ ಹೆಚ್ಚಿನ ನೌಕರರನ್ನು ಕೆಲಸದಿಂದ ತೆಗೆದಿದೆ. 2020ರ ಆರಂಭದಲ್ಲಿ ಈ ಘಟಕದಲ್ಲಿ 500ಕ್ಕಿಂತ ಹೆಚ್ಚು ನೌಕರರು ಕೆಲಸ ಮಾಡುತ್ತಿದ್ದರು. ಆದರೆ, ಕೆಲಸ ಕಳೆದುಕೊಂಡವರ ನಿಖರ ಸಂಖ್ಯೆ ಗೊತ್ತಾಗಿಲ್ಲ.

ಕಂಪನಿಯು ತನ್ನ ವಹಿವಾಟುಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದು, ಲಾಭದಲ್ಲಿ ಇರುವ ಅಥವಾ ಮುಂದೆ ಲಾಭ ತಂದುಕೊಡಬಲ್ಲವುಗಳನ್ನು ಮಾತ್ರ ಉಳಿಸಿಕೊಳ್ಳುವ ಉದ್ದೇಶ ಹೊಂದಿದೆ. ಮಹೀಂದ್ರ ಆಟೊಮೊಟಿವ್ ನಾರ್ತ್‌ ಅಮೆರಿಕ (ಎಂಎಎನ್‌ಎ) ಸಂಸ್ಥೆಯಲ್ಲಿ ‘2020ರ ಮಧ್ಯಭಾಗದ ನಂತರ ನೂರಾರು ಕೆಲಸಗಾರರನ್ನು ತೆಗೆದುಹಾಕಲಾಗಿದೆ’ ಎಂದು ಮೂಲವೊಂದು ತಿಳಿಸಿದೆ.

ಕೆಲವು ಸಿಬ್ಬಂದಿಯನ್ನು ರಜೆಯ ಮೇಲೆ ಕಳುಹಿಸಲಾಗಿದ್ದು, ಇನ್ನು ಕೆಲವರನ್ನು ಕೆಲಸದಿಂದ ತೆಗೆಯಲಾಗಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ. ಕಾನೂನು ಸಮರವೊಂದರ ಕಾರಣ ಮಹೀಂದ್ರ ಕಂಪನಿಗೆ ಅಮೆರಿಕದಲ್ಲಿ ರಾಕ್ಸರ್ ವಾಹನ ಮಾರಾಟ ಮಾಡಲು ಆಗುತ್ತಿರಲಿಲ್ಲ. ಈಗ ಮಾರಾಟ ಮಾಡಲು ಸಾಧ್ಯವಾಗುವ ರೀತಿಯಲ್ಲಿ ಆದೇಶ ಬಂದಿದೆ. ‘ಈಗ ನಾವು ಹಲವು ನೌಕರರನ್ನು ವಾಪಸ್‌ ಕರೆಸಿಕೊಳ್ಳಬಹುದು’ ಎಂದೂ ಕಂಪನಿಯ ಪ್ರಕಟಣೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT