ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಂಕ್‌: ವಾರದಲ್ಲಿ ಐದೇ ದಿನ ಕೆಲಸ?

Published 7 ಆಗಸ್ಟ್ 2023, 13:54 IST
Last Updated 7 ಆಗಸ್ಟ್ 2023, 13:54 IST
ಅಕ್ಷರ ಗಾತ್ರ

ಬೆಂಗಳೂರು: ಬ್ಯಾಂಕ್‌ ನೌಕರರಿಗೆ ತಿಂಗಳ ಎಲ್ಲ ಶನಿವಾರವೂ ರಜೆ ನೀಡುವ ಪ್ರಸ್ತಾವಕ್ಕೆ ಇಂಡಿಯನ್ ಬ್ಯಾಂಕರ್ಸ್ ಅಸೋಸಿಯೇಷನ್ (ಐಬಿಎ) ಒಪ್ಪಿಗೆ ನೀಡಿದೆ. ಈ ಸಂಬಂಧ ಶಿಫಾರಸನ್ನು ಕೇಂದ್ರ ಹಣಕಾಸು ಸಚಿವಾಲಯಕ್ಕೆ ರವಾನಿಸಿದೆ ಎಂದು ಮೂಲಗಳು ಹೇಳಿವೆ.

ಈ ಶಿಫಾರಸು ಜಾರಿಗೆ ಬಂದರೆ, ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಬ್ಯಾಂಕ್‌ ಶಾಖೆಗಳಲ್ಲಿ ಸೇವೆಗಳು ಲಭ್ಯವಿರಲಿವೆ.

ಈಗ ಬ್ಯಾಂಕ್‌ ನೌಕರರಿಗೆ ಪ್ರತಿ ತಿಂಗಳ ಎರಡನೆಯ ಹಾಗೂ ನಾಲ್ಕನೆಯ ಶನಿವಾರ ರಜೆ ಇದೆ. ಈ ರಜೆಯನ್ನು ಎಲ್ಲ ಶನಿವಾರಗಳಿಗೂ ವಿಸ್ತರಣೆ ಮಾಡಬೇಕು ಎಂಬ ಬೇಡಿಕೆಯನ್ನು ಬ್ಯಾಂಕಿಂಗ್ ವಲಯದ ವಿವಿಧ ಕಾರ್ಮಿಕ ಸಂಘಟನೆಗಳು ಇರಿಸಿದ್ದವು.

ಜುಲೈ ತಿಂಗಳ ಕೊನೆಯಲ್ಲಿ ನಡೆದ ಸಭೆಯಲ್ಲಿ ಈ ಪ್ರಸ್ತಾವಕ್ಕೆ ಐಬಿಎ ಒಪ್ಪಿದ್ದು, ಅದನ್ನು ಹಣಕಾಸು ಸಚಿವಾಲಯಕ್ಕೆ ಶಿಫಾರಸು ಮಾಡಿದೆ. ಇದಕ್ಕೆ ಹಣಕಾಸು ಸಚಿವಾಲಯ, ಕೇಂದ್ರ ಕಾರ್ಮಿಕ ಸಚಿವಾಲಯ ಸೇರಿದಂತೆ ಕೆಲವು ಸಚಿವಾಲಯಗಳ ಸಮ್ಮತಿ ಸಿಗಬೇಕಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT