ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಭಾರತದ ಆರ್ಥಿಕ ತಳಹದಿ ಬಲಿಷ್ಠವಾಗಿದೆ’

Last Updated 16 ಅಕ್ಟೋಬರ್ 2019, 19:52 IST
ಅಕ್ಷರ ಗಾತ್ರ

ನವದೆಹಲಿ: ‘ದೇಶದ ಆರ್ಥಿಕ ತಳಹದಿ ಬಹಳ ಬಲಿಷ್ಠವಾಗಿದೆ‘ ಎಂದು ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್‌ ಅವರು ಅಭಿಪ್ರಾಯಪಟ್ಟಿದ್ದಾರೆ.

ದೇಶದ ಆರ್ಥಿಕತೆ ಬಲಿಷ್ಠವಾಗಿದ್ದು, ಶೇ 7 ರಿಂದ ಶೇ 8ರ ಬೆಳಗಣಿಗೆ ಹಾದಿಗೆ ಮರಳಲಿದೆ. ಬಂಡವಾಳ ಹೂಡಿಕೆ ಮಾಡುವಂತೆ ಉದ್ಯಮಗಳಿಗೆ ಕರೆ ಕೊಟ್ಟಿದ್ದಾರೆ.

ಸಣ್ಣ ಉದ್ದಿಮೆಗಳು ಬಂಡವಾಳದ ಮೇಲೆ ಹೆಚ್ಚು ಅವಲಂಬಿತವಾಗಿವೆ. ಹೀಗಾಗಿ ಕಾಲಕಾಲಕ್ಕೆ ಪಾವತಿ ಮಾಡುವಂತೆ ದೊಡ್ಡ ಕಂಪನಿಗಳಿಗೆ ಸೂಚನೆ ನೀಡಿದ್ದರೆ. ಸಣ್ಣ ಕಂಪನಿಗಳಿಗೆ ₹ 40 ಸಾವಿರ ಕೋಟಿ ಪಾವತಿಸಬೇಕಿದೆ.

ಫಿಕ್ಕಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರ ಅವರು, ಸಣ್ಣ ಕಂಪನಿಗಳಿಗೆ ಬಾಕಿ ಉಳಿಸಿಕೊಂಡಿರುವ ಮೊತ್ತ ಪಾವತಿಸುವಲ್ಲಿ ದೊಡ್ಡ ಕಂಪನಿಗಳು ಜವಾಬ್ದಾರಿಯುತ ಪಾತ್ರ ವಹಿಸಬೇಕಿದೆ ಎಂದಿದ್ದಾರೆ.

‘ಬಂಡವಾಳ ಹೂಡಿಕೆ ಇಳಿಮುಖವಾಗಿರುವುದರಿಂದಲೇ ದೇಶದಆರ್ಥಿಕ ಬೆಳವಣಿಗೆ ಮಂದಗತಿಯಲ್ಲಿ ಸಾಗುತ್ತಿದೆ. ಕಡಿಮೆ ವೆಚ್ಚಕ್ಕೆ ಕಾರ್ಮಿಕರು ಲಭ್ಯವಿರುವುದರಿಂದ ಹೂಡಿಕೆ ಮಾಡಲು ಇದು ಸೂಕ್ತ ಸಂದರ್ಭ. ದೀರ್ಘಾವಧಿಯ ಯೋಜನೆಯೊಂದಿಗೆ ಬಂಡವಾಳ ತೊಡಗಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT