ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಆರ್ಥಿಕತೆ 2022-23ಕ್ಕೆ ಶೇ 7ರಷ್ಟು ಬೆಳವಣಿಗೆ: ಕೇಂದ್ರ ಸರ್ಕಾರ

Last Updated 6 ಜನವರಿ 2023, 13:07 IST
ಅಕ್ಷರ ಗಾತ್ರ

ನವದೆಹಲಿ: 2022-23ಕ್ಕೆ ಭಾರತದ ಆರ್ಥಿಕತೆ ಬೆಳವಣಿಗೆ ಅಂದಾಜು ಶೇಕಡ 7ರಷ್ಟು ದಾಖಲಿಸುವ ನಿರೀಕ್ಷೆಯಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಕಳೆದ ವರ್ಷ ಶೇಕಡ 8.7ರಷ್ಟಿತ್ತು.

ಉತ್ಪಾದನಾ ವಲಯದ ಕಳಪೆ ಪ್ರದರ್ಶನವೇ ಇದಕ್ಕೆ ಮುಖ್ಯ ಕಾರಣ ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ) ಶುಕ್ರವಾರ ಹೇಳಿದೆ.

ಎನ್‌ಎಸ್‌ಒ ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ 2022-23ರಲ್ಲಿ ಭಾರತದ ಒಟ್ಟು ಆಂತರಿಕ ಉತ್ಪನ್ನವು (ಜಿಡಿಪಿ) ಅಂದಾಜು 157.60 ಲಕ್ಷ ಕೋಟಿ ಏರಿಕೆ ಕಾಣಲಿದೆ. ಹಿಂದಿನ ವರ್ಷದ ಜಿಡಿಪಿ ಅಂದಾಜು 147.36 ಲಕ್ಷ ಕೋಟಿ.

ಕಳೆದ ವರ್ಷದ ಶೇಕಡ 8.7ರಷ್ಟು ಜಿಡಿಪಿಗೆ ಹೋಲಿಸಿದರೆ 2022-23ರ ಅವಧಿಯಲ್ಲಿ ಶೇಕಡ 7ರಷ್ಟು ಬೆಳವಣಿಗೆ ಹೊಂದಲಿದೆ ಎಂದು ಅಂದಾಜಿಸಿರುವುದಾಗಿ ಎನ್‌ಎಸ್‌ಒ ಹೇಳಿದೆ.

ಉತ್ಪಾದನಾ ವಲಯದಲ್ಲಿ ಶೇಕಡ 1.6ರಷ್ಟು ಬೆಳವಣಿಗೆಯನ್ನು ಅಂದಾಜಿಸಲಾಗಿದೆ. ಕಳೆದ ವರ್ಷ ಶೇಕಡ 9.9ರಷ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT