ಬೆಂಗಳೂರು: ಬೆಂಗಳೂರು ಮೂಲದ ರಿಯಲ್ ಎಸ್ಟೇಟ್ ಕಂಪನಿ ಪುರವಂಕರ ತನ್ನ ಸುವರ್ಣ ಮಹೋತ್ಸವದ ಪ್ರಯುಕ್ತ ವಿಶೇಷ ಅಂಚೆ ಚೀಟಿಯನ್ನು, ಭಾರತೀಯ ಅಂಚೆ ಇಲಾಖೆ ಜೊತೆಗೂಡಿ ಬುಧವಾರ ಬಿಡುಗಡೆ ಮಾಡಿದೆ.

ಅಂಚೆ ಇಲಾಖೆಯು ವಿಶೇಷ ಸಂದರ್ಭಗಳಲ್ಲಿ ಕಂಪನಿಗಳಿಗೆ, ಸಂಸ್ಥೆಗಳಿಗೆ ವಿಶೇಷ ಅಂಚೆ ಚೀಟಿಯನ್ನು ರೂಪಿಸಿಕೊಡುತ್ತದೆ. ಇದಕ್ಕೆ ‘ಮೈ ಸ್ಟ್ಯಾಂಪ್’ ಎಂದು ಹೆಸರು.

‘1975ರಲ್ಲಿ ಸ್ಥಾಪನೆಯಾದ ಕಂಪನಿಯು ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಅಂಚೆ ಇಲಾಖೆ ಜೊತೆ ಸೇರಿ ಬಿಡುಗಡೆ ಮಾಡಿರುವ ಅಂಚೆ ಚೀಟಿಯು ಪುರವಂಕರ ಕಂಪನಿಯ ಪಯಣವನ್ನು ಹೇಳುತ್ತದೆ. ಸ್ಟ್ಯಾಂಪ್ನಲ್ಲಿರುವ ನೀಲಿ ಬಣ್ಣವು ಕಠಿಣ ಶ್ರಮದ ಸಂಕೇತ, ದ ಆರ್ಟ್ ಆಫ್ ಡೆವಲಪ್ಮೆಂಟ್ ಶೀರ್ಷಿಕೆ ಸೃಜನಾತ್ಮಕತೆ ಆಗಿದೆ’ ಎಂದು ಕಂಪನಿಯ ದಕ್ಷಿಣ ವಲಯದ ಸಿಇಒ ಮಲ್ಲಣ್ಣ ಸಾಸಲು ಹೇಳಿದರು.

ಕರ್ನಾಟಕ ಅಂಚೆ ವೃತ್ತದ ಚೀಫ್ ಪೋಸ್ಟ್ ಮಾಸ್ಟರ್ ಜನರಲ್ ಕೆ. ಪ್ರಕಾಶ್ ಮಾತನಾಡಿ, ‘ಅಂಚೆ ಚೀಟಿಗಳು ಸೂಕ್ಷ್ಮ ಕಲಾಕೃತಿಗಳಷ್ಟೇ ಅಲ್ಲ. ಅವು ಇತಿಹಾಸ, ಸಾಧನೆ, ಸಂಸ್ಕೃತಿಯ ಪ್ರತೀಕ. ಮೈ ಸ್ಟ್ಯಾಂಪ್ನಂತಹ ಕ್ರಮಗಳು ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಕಂಪನಿಗಳ ಕೊಡುಗೆಯನ್ನು ಸ್ಮರಿಸುತ್ತವೆ’ ಎಂದರು.

Highlights - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.