ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2022 | ಏಷ್ಯಾದಲ್ಲಿ ಅತ್ಯಂತ ಕಳಪೆ ಸಾಧನೆ ತೋರಿದ ಕರೆನ್ಸಿ ಭಾರತದ ರೂಪಾಯಿ

Last Updated 31 ಡಿಸೆಂಬರ್ 2022, 5:00 IST
ಅಕ್ಷರ ಗಾತ್ರ

ಮುಂಬೈ: 2022ರಲ್ಲಿ ಭಾರತ ರೂಪಾಯಿಯು ಏಷ್ಯಾದಲ್ಲಿ ಅತ್ಯಂತ ಕಳಪೆ ಸಾಧನೆ ತೋರಿದ ಕರೆನ್ಸಿಯಾಗಿದೆ. ರೂಪಾಯಿ ಈ ವರ್ಷದಲ್ಲಿ ಒಟ್ಟು ಶೇಕಡ 11.3ರಷ್ಟು ಕುಸಿತ ಕಂಡಿದೆ. 2013ರ ನಂತರದ ಅತ್ಯಂತ ದೊಡ್ಡ ಕುಸಿತ ಇದು.

2021ರ ಕೊನೆಯಲ್ಲಿ ರೂಪಾಯಿ ಮೌಲ್ಯವು ಅಮೆರಿಕದ ಡಾಲರ್ ಎದುರು ₹ 74.33 ಆಗಿತ್ತು. 2022ರ ಕೊನೆಯಲ್ಲಿ ರೂಪಾಯಿ ಮೌಲ್ಯವು ಡಾಲರ್ ಎದುರು ₹ 82.72ಕ್ಕೆ (ಡಿ. 29ರ ಮೌಲ್ಯ) ತಲುಪಿದೆ.

ರಷ್ಯಾ–ಉಕ್ರೇನ್ ಯುದ್ದದ ಕಾರಣದಿಂದಾಗಿ ಕಚ್ಚಾ ತೈಲದ ಬೆಲೆಯಲ್ಲಿ ಆದ ಹೆಚ್ಚಳ ಕೂಡ ರೂಪಾಯಿ ಮೌಲ್ಯ ಕುಸಿತಕ್ಕೆ ಇಂಬು ಕೊಟ್ಟಿತು. ಹೊಸ ವರ್ಷದ ಮೊದಲ ತ್ರೈಮಾಸಿಕದಲ್ಲಿ ರೂ‍‍ಪಾಯಿ ಮೌಲ್ಯವು ₹ 81.50ರಿಂದ ₹ 83.50ರ ನಡುವೆ ಇರಲಿದೆ ಎಂದು ವರ್ತಕರು ಹಾಗೂ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT