ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾಲರ್‌ ಎದುರು ರೂಪಾಯಿ ಮೌಲ್ಯ 6 ಪೈಸೆ ಇಳಿಕೆ

Last Updated 27 ಆಗಸ್ಟ್ 2020, 6:24 IST
ಅಕ್ಷರ ಗಾತ್ರ

ಮುಂಬೈ: ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾದಿಂದ ಹೂಡಿಕೆದಾರರು ಹೊಸಸೂಚನೆಗಳ ನಿರೀಕ್ಷೆಯಲ್ಲಿದ್ದು,ಗುರುವಾರ ಆರಂಭಿಕ ವಹಿವಾಟಿನಲ್ಲಿ ಅಮೆರಿಕನ್‌ ಡಾಲರ್‌ ಎದುರು ರೂಪಾಯಿ ಮೌಲ್ಯ 6 ಪೈಸೆ ಇಳಿಕೆ ಕಂಡಿದೆ.74.36ಕ್ಕೆ ವಿನಿಮಯಗೊಂಡಿದೆ.

ಬುಧವಾರ ಡಾಲರ್‌ ಎದುರು ರೂಪಾಯಿ ಮೌಲ್ಯ 74.30 ರಷ್ಟಿತ್ತು. ಇತರೆ ಕರೆನ್ಸಿಗಳ ಎದುರು ಡಾಲರ್‌ ಮೌಲ್ಯ 0.15 ರಷ್ಟು ಕುಸಿದು 92.87ಕ್ಕೆ ತಲುಪಿದೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ದರ ಶೇ 0.24ರಷ್ಟು ಏರಿಕೆಯಾಗಿ ಒಂದು ಬ್ಯಾರೆಲ್‌ಗೆ 45.75 ಡಾಲರ್‌ಗೆ ಮಾರಾಟವಾಯಿತು.

ಜಾಗತಿಕ ಷೇರುಪೇಟೆಗಳ ವಹಿವಾಟು ಮತ್ತು ಕೋವಿಡ್‌ ಪ್ರಕರಣಗಳು ದೇಶಿ ಷೇರುಪೇಟೆಯ ಮೇಲೆ ಪರಿಣಾಮ ಬೀರುತ್ತಿವೆ.

ಸದ್ಯ ವಿಶ್ವದಾದ್ಯಂತ ಕೋವಿಡ್‌ ಸೋಂಕಿತರ ಸಂಖ್ಯೆ 2.5 ಕೋಟಿ ದಾಟಿದ್ದು, ಸಾವಿನ ಸಂಖ್ಯೆ 8.25 ಲಕ್ಷ ಮುಟ್ಟಿದೆ. ಇತ್ತ ಭಾರತದಲ್ಲಿ ಸೋಂಕಿತರ ಸಂಖ್ಯೆ 33,10,235ಕ್ಕೆ ಏರಿಕೆಯಾಗಿದ್ದು, 60,472 ಮಂದಿ ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT