ಮುಂಬೈ: ಜೂನ್ 13ಕ್ಕೆ ಕೊನೆಗೊಂಡ ವಾರದಲ್ಲಿ ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹಕ್ಕೆ ₹19,862 ಕೋಟಿ ಸೇರ್ಪಡೆಯಾಗಿದೆ.

ಪ್ರಸ್ತುತ ಒಟ್ಟು ಮೀಸಲು ಸಂಗ್ರಹ ₹60.31 ಲಕ್ಷ ಕೋಟಿಯಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ತಿಳಿಸಿದೆ.

2024ರ ಸೆಪ್ಟೆಂಬರ್ನಲ್ಲಿ ಮೀಸಲು ಸಂಗ್ರಹ ₹61.03 ಲಕ್ಷ ಕೋಟಿಯಾಗಿತ್ತು. ಇದು ಇದುವರೆಗಿನ ಸಾರ್ವಕಾಲಿಕ ಗರಿಷ್ಠ ಮಟ್ಟವಾಗಿದೆ.

ವಿದೇಶಿ ಕರೆನ್ಸಿಯ ಒಟ್ಟು ಸಂಗ್ರಹ ಪ್ರಮಾಣ ₹15,056 ಕೋಟಿ ಹೆಚ್ಚಳವಾಗಿದ್ದು, ₹51.03 ಲಕ್ಷ ಕೋಟಿಯಾಗಿದೆ. ಚಿನ್ನದ ಮೀಸಲು ಸಂಗ್ರಹವು ₹7.47 ಲಕ್ಷ ಕೋಟಿಗೆ ಹೆಚ್ಚಳವಾಗಿದೆ. ಸ್ಪೆಷಲ್ ಡ್ರಾಯಿಂಗ್ ರೈಟ್ಸ್ (ಎಸ್ಡಿಆರ್) ಮೀಸಲು ₹1.62 ಲಕ್ಷ ಕೋಟಿ ಆಗಿದೆ.

ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿನ (ಐಎಂಎಫ್) ಭಾರತದ ಮೀಸಲು ಸಂಗ್ರಹವು ₹38,546 ಕೋಟಿಯಾಗಿದೆ ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.