ಭಾನುವಾರ, ಜನವರಿ 16, 2022
28 °C

ಅಮೆಜಾನ್ ವಿರುದ್ಧ ಸಿಸಿಐಗೆ ಫ್ಯೂಚರ್‌ ರಿಟೇಲ್‌ ಕಂಪನಿ ದೂರು

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ನವದೆಹಲಿ: ಫ್ಯೂಚರ್ ರಿಟೇಲ್ ಲಿಮಿಟೆಡ್ ಜೊತೆಗಿನ ವಹಿವಾಟಿಗೆ ಸಂಬಂಧಿಸಿದಂತೆ ಅಮೆಜಾನ್ ಕಂಪನಿಯು ಭಾರತೀಯ ಸ್ಪರ್ಧಾ ಆಯೋಗಕ್ಕೆ (ಸಿಸಿಐ) ನೀಡಿರುವ ಮಾಹಿತಿಗೂ, ಕಂಪನಿಯ ಆಂತರಿಕ ಸಂವಹನದ ಸಂದರ್ಭದಲ್ಲಿ ಉಲ್ಲೇಖವಾಗಿರುವ ಮಾಹಿತಿಗೂ ತಾಳೆ ಆಗುತ್ತಿಲ್ಲ ಎಂದು ಫ್ಯೂಚರ್‌ ರಿಟೇಲ್‌ ಕಂಪನಿಯ ಸ್ವತಂತ್ರ ನಿರ್ದೇಶಕರು ಆರೋಪಿಸಿದ್ದಾರೆ.

ಈ ವಿಚಾರವಾಗಿ ಅಮೆಜಾನ್ ಹಾಗೂ ಸಿಸಿಐ ಪ್ರತಿಕ್ರಿಯೆ ನೀಡಿಲ್ಲ. ಅಮೆಜಾನ್ ಕಂಪನಿಯ ಉದ್ದೇಶವು ಫ್ಯೂಚರ್‌ ಕೂಪನ್ಸ್ ಕಂಪನಿಯಲ್ಲಿ ಹೂಡಿಕೆ ಮಾಡುವುದಲ್ಲ. ಬದಲಿಗೆ, ಪ್ಯೂಚರ್ ರಿಟೇಲ್‌ನಲ್ಲಿ ಹೂಡಿಕೆ ಮಾಡುವ ಉದ್ದೇಶವನ್ನು ಅಮೆಜಾನ್ ಹೊಂದಿದೆ ಎಂದು ಅವರು ನವೆಂಬರ್‌ 10ರಂದು ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.

‘ಅಮೆಜಾನ್‌ಗೆ ಹೂಡಿಕೆಗೆ ನೀಡಿರುವ ಅನುಮತಿಯನ್ನು ಸಿಸಿಐ ರದ್ದುಪಡಿಸಬೇಕು’ ಎಂದು ಫ್ಯೂಚರ್ ಕಂಪನಿಯ ಸ್ವತಂತ್ರ ನಿರ್ದೇಶಕರು ಒತ್ತಾಯಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು