ಬೀಜಿಂಗ್: ಭಾರತ ಮತ್ತು ಚೀನಾ ನಡುವಿನ ವ್ಯಾಪಾರ ವಹಿವಾಟಿನ ಮೊತ್ತವು 2022ರಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 135.98 ಬಿಲಿಯನ್ ಡಾಲರ್‌ಗೆ (₹ 11.04 ಲಕ್ಷ ಕೋಟಿ) ತಲುಪಿದೆ.
ಆದರೆ ಚೀನಾದ ಜೊತೆಗಿನ ಭಾರತದ ವ್ಯಾಪಾರ ಕೊರತೆಯು ಇದೇ ಮೊದಲ ಬಾರಿಗೆ 100 ಬಿಲಿಯನ್ ಡಾಲರ್ (₹ 8.12 ಲಕ್ಷ ಕೋಟಿ) ಗಡಿಯನ್ನು ದಾಟಿದೆ.
ಚೀನಾದ ಕಸ್ಟಮ್ಸ್ ಇಲಾಖೆ ಬಿಡುಗಡೆ ಮಾಡಿರುವ ಅಂಕಿ–ಅಂಶಗಳಲ್ಲಿ ಈ ವಿವರಣೆ ಇದೆ. ಭಾರತ ಮತ್ತು ಚೀನಾ ನಡುವಿನ ವಹಿವಾಟಿನ ಒಟ್ಟು ಮೊತ್ತವು ಶೇಕಡ 8.4ರಷ್ಟು ಬೆಳವಣಿಗೆ ಕಂಡಿದೆ. ಚೀನಾದಿಂದ ಭಾರತಕ್ಕೆ ಆಗುವ ರಫ್ತುಗಳ ಪ್ರಮಾಣವು ಶೇ 21.7ರಷ್ಟು ಹೆಚ್ಚಾಗಿದೆ. ಇದೇ ಅವಧಿಯಲ್ಲಿ ಭಾರತದಿಂದ ಚೀನಾಕ್ಕೆ ಆಗುವ ರಫ್ತಿನ ಪ್ರಮಾಣವು ಶೇ 37.9ರಷ್ಟು ಕಡಿಮೆ ಆಗಿದೆ.
ಚೀನಾ ಜೊತೆಗಿನ ವಹಿವಾಟಿನಲ್ಲಿ ಭಾರತದ ವ್ಯಾಪಾರ ಕೊರತೆ ಅಂತರವು 2021ರಲ್ಲಿ 69.38 ಬಿಲಿಯನ್ ಡಾಲರ್ (₹ 5.63 ಲಕ್ಷ ಕೋಟಿ) ಆಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.