ಸೋಮವಾರ, ಸೆಪ್ಟೆಂಬರ್ 27, 2021
23 °C

ಭಾರತದಲ್ಲಿ ಹೆಚ್ಚಿದ ಇಂಧನ ಬೇಡಿಕೆ: ಜುಲೈನಲ್ಲಿ ಮೂರು ತಿಂಗಳಲ್ಲೇ ಗರಿಷ್ಠ

ರಾಯಿಟರ್ಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಷ್ಟ್ರದಲ್ಲಿ ಕೊರೊನಾ ವೈರಸ್‌ ಹರಡುವಿಕೆ ತಡೆಗೆ ಹೇರಲಾದ ಲಾಕ್‌ಡೌನ್‌ ಮತ್ತು ಕಠಿಣಕ್ರಮಗಳು ಬಹುತೇಕ ತೆರವುಗೊಂಡ ಬಳಿಕ ದೇಶದಲ್ಲಿ ಪುನಃ ಇಂಧನ ಬೇಡಿಕೆ ಹೆಚ್ಚಾಗಿದೆ. ಜುಲೈನಲ್ಲಿ ಇಂಧನ ಬೇಡಿಕೆಯು ಮೂರು ತಿಂಗಳಲ್ಲೇ ಗರಿಷ್ಠ ಮಟ್ಟಕೆ ತಲುಪಿದೆ.

ದೇಶದಲ್ಲಿ ತೈಲ ಬೇಡಿಕೆಯು ಒಟ್ಟು 16.83 ದಶಲಕ್ಷ ಟನ್‌ ಇದೆ. ಜೂನ್‌ನಿಂದ ಈ ಪ್ರಮಾಣ ಶೇಕಡಾ 2.9ರಷ್ಟು ಹೆಚ್ಚಿದೆ. ಕಳೆದ ವರ್ಷ ಇದೇ ವೇಳೆಗೆ ಹೋಲಿಸಿದರೆ ಶೇಕಡಾ 7.9ರಷ್ಟು ಹೆಚ್ಚಳವಾಗಿದೆ. ಪೆಟ್ರೋಲಿಯಂ ಯೋಜನೆ ಮತ್ತು ಸಮೀಕ್ಷೆ ಕುರಿತ ಮಾಹಿತಿ ನೀಡುವ ಪಿಪಿಎಸಿ ವೆಬ್‌ಸೈಟ್‌ನಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ.

ಮೇ ತಿಂಗಳಲ್ಲಿ ತೈಲ ಆಮದು ಇಳಿಕೆ ಕಂಡಿತ್ತು. ಕೋವಿಡ್‌ 2ನೇ ಅಲೆ ಕಾರಣ ಹೆಚ್ಚಿನ ರಾಜ್ಯಗಳಲ್ಲಿ ಲಾಕ್‌ಡೌನ್‌ ಚಾಲ್ತಿಯಲ್ಲಿದ್ದಿದ್ದರಿಂದ ಇಂಧನ ಬೇಡಿಕೆ ಕುಸಿದಿತ್ತು. ಇದೀಗ ಹೆಚ್ಚಿನ ರಾಜ್ಯಗಳಲ್ಲಿ ಲಾಕ್‌ಡೌನ್‌ ತೆರವು ಮಾಡಲಾಗಿದೆ. ಇದರಿಂದಾಗಿ ಪುನಃ ಇಂಧನ ಬೇಡಿಕೆ ಏರಿಕೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು