ಗುರುವಾರ , ಸೆಪ್ಟೆಂಬರ್ 23, 2021
28 °C

ತಯಾರಿಕಾ ಚಟುವಟಿಕೆ ಇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ತಯಾರಿಕಾ ವಲಯದ ಚಟುವಟಿಕೆಯು ಸತತ ನಾಲ್ಕನೇ ತಿಂಗಳಿನಲ್ಲಿಯೂ ಇಳಿಕೆಯಾಗಿದೆ. ಲಾಕ್‌ಡೌನ್‌ನಿಂದಾಗಿ ಬೇಡಿಕೆ ಕಡಿಮೆಯಾಗಿರುವುದು ಹಾಗೂ ಪರಸ್ಪರ ಅಂತರ ಕಾಯ್ದುಕೊಳ್ಳುವ ಉದ್ದೇಶದಿಂದ ಕೆಲಸಗಾರರ ಸಂಖ್ಯೆಯಲ್ಲಿ ಕಡಿತ ಮಾಡಿರುವುದೇ ಜುಲೈನಲ್ಲಿ ತಯಾರಿಕಾ ವಲಯದ ಚಟುವಟಿಕೆ ಇಳಿಕೆಯಾಗಲು ಕಾರಣ ಎಂದು ಐಎಚ್‌ಎಸ್‌ ಮರ್ಕಿಟ್‌ ಇಂಡಿಯಾ ಕಂಪನಿ ತಿಳಿಸಿದೆ.

ತಯಾರಿಕಾ ವಲಯದ ಚಟುವಟಿಕೆಯನ್ನು ಸೂಚಿಸುವ, ಮ್ಯಾನುಫ್ಯಾಕ್ಚರಿಂಗ್‌ ಪರ್ಚೇಸಿಂಗ್‌ ಮ್ಯಾನೇಜರ್ಸ್‌ ಇಂಡೆಕ್ಸ್‌ (ಪಿಎಂಐ) ಜೂನ್‌ನಲ್ಲಿ 47.2 ಇದ್ದಿದ್ದು ಜುಲೈನಲ್ಲಿ 46ಕ್ಕೆ ಇಳಿಕೆಯಾಗಿದೆ.

ನಿರಂತರವಾಗಿ 32 ತಿಂಗಳವರೆಗೆ 50ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇದ್ದ ಸೂಚ್ಯಂಕವು ಏಪ್ರಿಲ್‌ನಲ್ಲಿ ಇಳಿಕೆ ಕಾಣಲು ಆರಂಭಿಸಿತು.

‘ಕೋವಿಡ್‌ ಹೊಡೆತಕ್ಕೆ ಸಿಲುಕಿರುವ ದೇಶದ ಆರ್ಥಿಕ ಸ್ಥಿತಿಯ ಮೇಲೆ ಜುಲೈ ತಿಂಗಳ ಪಿಎಂಐ ಬೆಳಕು ಚೆಲ್ಲಿದೆ. ಇಳಿಮುಖವಾಗಿದ್ದ ಸೂಚ್ಯಂಕಗಳು ಮತ್ತೆ ಚೇತರಿಕೆ ಹಾದಿಗೆ ಮರಳಿವೆ. ಏಪ್ರಿಲ್‌ ( 27.4) ಮತ್ತು ಮೇ ತಿಂಗಳಿಗೆ (30.8) ಹೋಲಿಸಿದರೆ ಜೂನ್‌ ಮತ್ತು ಜುಲೈನಲ್ಲಿನ ಸೂಚ್ಯಂಕದ ಬೆಳವಣಿಗೆಯು ಮತ್ತೆ  ಸ್ಥಿರತೆಯತ್ತ ಮರಳುವ ಸೂಚನೆ ನೀಡುತ್ತಿದೆ’ ಎಂದು ಐಎಚ್‌ಎಸ್‌ ಮರ್ಕಿಟ್‌ನ ಆರ್ಥಿಕ ತಜ್ಞ ಏಲಿಯಟ್‌ ಕೆರ್‍ರಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು