ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತವು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿರುವ ಕಚ್ಚಾ ತೈಲ ಖರೀದಿ ಇಳಿಕೆ ಸಾಧ್ಯತೆ

ತಗ್ಗಿದ ರಿಯಾಯಿತಿ * ಹಣ ಪಾವತಿಗೆ ಸಮಸ್ಯೆ
Published 18 ಜುಲೈ 2023, 16:12 IST
Last Updated 18 ಜುಲೈ 2023, 16:12 IST
ಅಕ್ಷರ ಗಾತ್ರ

ನವದೆಹಲಿ: ರಿಯಾಯಿತಿ ಇಳಿಕೆ, ಹಣ ಪಾವತಿಯಲ್ಲಿನ ಸಮಸ್ಯೆಯ ಕಾರಣದಿಂದಾಗಿ ಭಾರತವು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿರುವ ಕಚ್ಚಾ ತೈಲದ ಪ್ರಮಾಣವು ಮುಂದಿನ ದಿನಗಳಲ್ಲಿ ಕಡಿಮೆ ಆಗಬಹುದು ಎಂದು ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ರಷ್ಯಾ–ಉಕ್ರೇನ್ ಯುದ್ಧ ಶುರುವಾದ ನಂತರದಲ್ಲಿ ಭಾರತವು ರಷ್ಯಾದಿಂದ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಪ್ರಮಾಣವು ದಾಖಲೆಯ ಮಟ್ಟವನ್ನು ತಲುಪಿದೆ. ಭಾರತಕ್ಕೆ ರಷ್ಯಾ ದೇಶವು ಭಾರಿ ಪ್ರಮಾಣದಲ್ಲಿ ರಿಯಾಯಿತಿ ನೀಡಿದ್ದು ಇದಕ್ಕೆ ಕಾರಣ.

ಆದರೆ ಸೆಪ್ಟೆಂಬರ್‌ನಲ್ಲಿ ಭಾರತ ತಲುಪಲಿರುವ ಕಚ್ಚಾ ತೈಲಕ್ಕೆ ರಿಯಾಯಿತಿಯ ಪ್ರಮಾಣವು ಪ್ರತಿ ಬ್ಯಾರೆಲ್‌ಗೆ 3 ಡಾಲರ್‌ಗೆ ಇಳಿಕೆಯಾಗಿದೆ ಎಂದು ಮೂಲಗಳು ಹೇಳಿವೆ. ಕಚ್ಚಾ ತೈಲ ಉತ್ಪಾದನೆಯನ್ನು ಕಡಿಮೆ ಮಾಡಲು ಒಪೆಕ್+ ದೇಶಗಳು ತೀರ್ಮಾನಿಸಿದ ನಂತರದಲ್ಲಿ ರಿಯಾಯಿತಿ ಪ್ರಮಾಣವು ತಗ್ಗಿದೆ.

ಪಾಶ್ಚಿಮಾತ್ಯ ದೇಶಗಳು ಹೇರಿರುವ ನಿರ್ಬಂಧಗಳ ಕಾರಣದಿಂದಾಗಿ ಭಾರತದ ಕಂಪನಿಗಳಿಗೆ ರಷ್ಯಾದ ಸರಕುಗಳಿಗೆ ಹಣ ಪಾವತಿ ಮಾಡುವುದು ಕಷ್ಟವಾಗುತ್ತಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್‌ ಲಿ. ಕಂಪನಿಯು ಈಚೆಗೆ ಯುವಾನ್‌ (ಚೀನಾದ ಕರೆನ್ಸಿ) ಬಳಸಿ ಹಣ ಪಾವತಿಸಬೇಕಾಯಿತು.

ಆದರೆ ಈಗ ಭಾರತಕ್ಕೆ ಹೆಚ್ಚಿನ ರಿಯಾಯಿತಿ ದರದಲ್ಲಿ ಹೆಚ್ಚು ಕಚ್ಚಾ ತೈಲವನ್ನು ಪೂರೈಸಲು ಇರಾಕ್ ಮುಂದೆ ಬಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈಗ ಭಾರತಕ್ಕೆ ಕಚ್ಚಾ ತೈಲ ಪೂರೈಕೆ ಮಾಡುತ್ತಿರುವ ದೇಶಗಳ ಸಾಲಿನಲ್ಲಿ ಇರಾಕ್ ಎರಡನೆಯ ಸ್ಥಾನದಲ್ಲಿದೆ.

‘ರಿಯಾಯಿತಿ ಪ್ರಮಾಣವು ಕಡಿಮೆ ಆಗುತ್ತಿದೆ ಎಂಬುದು ತಿಳಿದಿದೆ. ಆದರೆ ಸೆಪ್ಟೆಂಬರ್‌ನಲ್ಲಿ ರಷ್ಯಾದಿಂದ ರವಾನೆ ಆಗುವ ತೈಲದ ಮೇಲೆ ಎಷ್ಟು ರಿಯಾಯಿತಿ ಸಿಗಲಿದೆ ಎಂಬುದು ಗೊತ್ತಾಗಿಲ್ಲ. ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್‌ಗೆ 60 ಡಾಲರ್‌ಗಿಂತ ಹೆಚ್ಚಿದ್ದರೆ ನಾವು ರಷ್ಯಾದಿಂದ ತೈಲ ಖರೀದಿಸುವುದಿಲ್ಲ’ ಎಂದು ತೈಲ ಸಂಸ್ಕರಣಾ ಕಂಪನಿಯೊಂದರ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT