ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಸೇವಾ ರಫ್ತು ಶೇ 11ರಷ್ಟು ಹೆಚ್ಚಳ

Published 25 ಏಪ್ರಿಲ್ 2024, 13:27 IST
Last Updated 25 ಏಪ್ರಿಲ್ 2024, 13:27 IST
ಅಕ್ಷರ ಗಾತ್ರ

ನವದೆಹಲಿ: ಜಾಗತಿಕ ಆರ್ಥಿಕ ಅನಿಶ್ಚಿತತೆಯ ನಡುವೆಯೂ 2023ನೇ ಸಾಲಿನಡಿ ದೇಶದ ಸೇವಾ ವಲಯದ ರಫ್ತು ವಹಿವಾಟಿನ ಮೌಲ್ಯವು ₹28.74 ಲಕ್ಷ ಕೋಟಿಗೆ ಮುಟ್ಟಿದೆ.

‘ಇದರ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 11.4ರಷ್ಟು ಹೆಚ್ಚಳವಾಗಿದೆ’ ಎಂದು ವಿಶ್ವಸಂಸ್ಥೆಯ ವಿಶ್ವ ವಾಣಿಜ್ಯ ಮತ್ತು ಅಭಿವೃದ್ಧಿ ಸಮ್ಮೇಳನದ (ಯುಎನ್‌ಸಿಟಿಎಡಿ) ತ್ರೈಮಾಸಿಕ ವರದಿ ತಿಳಿಸಿದೆ.

2022ಕ್ಕೆ ಹೋಲಿಸಿದರೆ ಚೀನಾ ರಫ್ತು ವಹಿವಾಟಿನ ಮೌಲ್ಯವು  ಶೇ 10.1ರಷ್ಟು ಕುಸಿದಿದ್ದು, ₹31.74 ಲಕ್ಷ ಕೋಟಿ ಆಗಿದೆ. ಡಾಲರ್‌ ಮೌಲ್ಯದಲ್ಲಿ ವಾರ್ಷಿಕ ಏರಿಕೆಯು ಶೇ 8.9ರಷ್ಟು ಹೆಚ್ಚಳವಾಗಿದ್ದು, ಜಗತ್ತಿನ ಸೇವಾ ರಫ್ತು ವಹಿವಾಟಿನ ಮೌಲ್ಯವು ₹658 ಲಕ್ಷ ಕೋಟಿಗೆ ತಲುಪಿದೆ ಎಂದು ವಿವರಿಸಿದೆ.

ಪ್ರಯಾಣ, ಸಾರಿಗೆ, ವೈದ್ಯಕೀಯ ಮತ್ತು ಆತಿಥ್ಯ ವಲಯವು ಈ ರಫ್ತು ಬೆಳವಣಿಗೆಗೆ ಕೊಡುಗೆ ನೀಡಿವೆ. ಸೇವಾ ವಲಯದ ರಫ್ತಿನಲ್ಲಿ ಭಾರತ, ಚೀನಾ, ಸಿಂಗಪುರ, ಟರ್ಕಿ, ಥೈಲ್ಯಾಂಡ್‌, ಮೆಕ್ಸಿಕೊ ಮತ್ತು ಸೌದಿ ಅರೇಬಿಯಾ ಮುಂದಿವೆ ಎಂದು ತಿಳಿಸಿದೆ. 

ಆದರೆ, 2022ಲ್ಲಿ ಭಾರತದ ಸೇವಾ ವಲಯದ ಆಮದು ಪ್ರಮಾಣ ಶೇ 0.4ರಷ್ಟು ಕಡಿಮೆಯಾಗಿದೆ. ಒಟ್ಟು ₹20.66 ಲಕ್ಷ ಕೋಟಿ ಮೌಲ್ಯದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲಾಗಿದೆ.

‘ದೇಶದಲ್ಲಿ ಐ.ಟಿ ಮತ್ತು ಐ.ಟಿ ಆಧಾರಿತ ಸೇವೆ ಮತ್ತು ಪ್ರಯಾಣ ವಲಯವು ದೃಢವಾಗಿದೆ’ ಎಂದು ಕೈಗಾರಿಕಾ ತಜ್ಞರು ಹೇಳಿದ್ದಾರೆ.

ಎಂಜಿನಿಯರಿಂಗ್‌, ವಾಸ್ತುಶಿಲ್ಪ, ಕಾನೂನು, ಲೆಕ್ಕಪತ್ರ ಸೇವೆ, ಸಂಶೋಧನೆ ಮತ್ತು ನಿರ್ವಹಣಾ ಸೇವಾ ವಲಯವು ಸರ್ಕಾರ ಒದಗಿಸುವ ಸವಲತ್ತನ್ನು ಸದ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT