ಬೆಂಗಳೂರು: ಬಾಟಲಿಯಲ್ಲಿ ಕುಡಿಯುವ ನೀರು ಮಾರಾಟ ಮಾಡುವ ಬಿಸ್ಲೆರಿ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳುವ ಮಾತುಕತೆ ಕೈಬಿಟ್ಟಿರುವುದಾಗಿ ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ ಶುಕ್ರವಾರ ತಿಳಿಸಿದೆ.
ಬಿಸ್ಲೆರಿ ಅಧ್ಯಕ್ಷ ರಮೇಶ್ ಚೌಹಾಣ್ ಅವರು ಕಂಪನಿಯನ್ನು ಟಾಟಾ ಕನ್ಸೂಮರ್‌ಗೆ ₹ 6,950 ಕೋಟಿಗೆ ಮಾರಾಟ ಮಾಡಲಿದ್ದಾರೆ ಎಂದು ನವೆಂಬರ್‌ನಲ್ಲಿ ವರದಿ ಆಗಿತ್ತು.
ಕಂಪನಿಯು ಯಾವುದೇ ನಿರ್ಣಾಯಕ ಒಪ್ಪಂದ ಮಾಡಿಕೊಂಡಿಲ್ಲ ಎಂದು ಟಾಟಾ ಕನ್ಸ್ಯೂಮರ್, ಷೇರು
ಪೇಟೆಗೆ ಹೇಳಿದೆ. ಈ ಕುರಿತು ಬಿಸ್ಲೆರಿ ಕಂಪನಿಯು ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.