ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಳೆ ಎಣ್ಣೆ ರಫ್ತು ನಿಷೇಧಿಸಿದ ಇಂಡೋನೇಷ್ಯಾ

Last Updated 23 ಏಪ್ರಿಲ್ 2022, 16:19 IST
ಅಕ್ಷರ ಗಾತ್ರ

ಜಕಾರ್ತ: ಇಂಡೊನೇಷ್ಯಾದಲ್ಲಿ ತಾಳೆ ಎಣ್ಣೆ ಬೆಲೆ ಏರಿಕೆಯನ್ನು ನಿಯಂತ್ರಿಸಲು ತಾಳೆ ಎಣ್ಣೆ ಮತ್ತು ಕಚ್ಚಾ ತಾಳೆ ಎಣ್ಣೆ ರಫ್ತು ಮಾಡುವುದನ್ನು ಏಪ್ರಿಲ್‌ 28ರಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ.

‘ಈ ನೀತಿಯ ಅನುಷ್ಠಾನವನ್ನು ನಾನು ಮೇಲ್ವಿಚಾರಣೆ ಮಾಡುತ್ತೇನೆ ಮತ್ತು ಮೌಲ್ಯಮಾಪನ ಮಾಡುತ್ತೇನೆ. ಹೀಗೆ ಮಾಡುವುದರಿಂದ ದೇಶಿ
ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಯ ಲಭ್ಯತೆ ಹೆಚ್ಚಾಗುವ ಜೊತೆಗೆ ಕೈಗೆಟುಕುವಂತಾಗುತ್ತದೆ’ ಎಂದು ಇಂಡೊನೇಷ್ಯಾ ಅಧ್ಯಕ್ಷ ಜೋಕೊ ವಿಡೊಡೊ ತಿಳಿಸಿದ್ದಾರೆ.

ಇಂಡೊನೇಷ್ಯಾದ ರಫ್ತು ನಿರ್ಧಾರದಿಂದ ಅಮೆರಿಕದ ಸೋಯಾ ಎಣ್ಣೆಯ ದರವು ಶೇ 3ರಷ್ಟು ಹೆಚ್ಚಾಗಿ ಪ್ರತಿ ಪೌಂಡ್‌ಗೆ ದಾಖಲೆಯ 84.03 ಸೆಂಟ್ಸ್‌ಗೆ ತಲುಪಿದೆ.

ಇಂಡೊನೇಷ್ಯಾದಲ್ಲಿ ಅಡುಗೆ ಎಣ್ಣೆಯ ಸರಾಸರಿ ರಿಟೇಲ್ ದರವು ಲೀಟರಿಗೆ ₹ 139.84ಕ್ಕೆ ತಲುಪಿದೆ. ಈ ವರ್ಷದಲ್ಲಿ ಈವರೆಗೆ ಬೆಲೆಯು
ಶೇ 40ರಷ್ಟು ಹೆಚ್ಚಾಗಿದೆ. ಕಳೆದೊಂದು ತಿಂಗಳಿನಲ್ಲಿ ಕೆಲವು ಪ್ರದೇಶಗಳಲ್ಲಿ ಬೆಲೆಯು ಎರಡು ಪಟ್ಟು ಏರಿಕೆ ಆಗಿದೆ.

ರಷ್ಯಾ–ಉಕ್ರೇನ್‌ ಸಂಘರ್ಷದಿಂದಾಗಿ ಜಾಗತಿಕ ಅಡುಗೆ ಎಣ್ಣೆ ಮಾರುಕಟ್ಟೆಯು ಹೆಚ್ಚು ಸಮಸ್ಯೆಗೆ ಸಿಲುಕಿದೆ. ಈ ಎರಡೂ ದೇಶಗಳಿಂದ ಸೂರ್ಯಕಾಂತಿ ಎಣ್ಣೆ ಪೂರೈಕೆ ನಿಂತಿದೆ.

‘ಭಾರತದ ಮೇಲೂ ಪರಿಣಾಮ’: ರಫ್ತು ನಿಷೇಧ ಕ್ರಮವು ದುರದೃಷ್ಟಕರವಾಗಿದ್ದು, ಸಂಪೂರ್ಣವಾಗಿ ಅನಿರೀಕ್ಷಿತವಾಗಿದೆ ಎಂದು ಸಾಲ್ವೆಂಟ್‌ ಎಕ್ಸ್‌ಟ್ರ್ಯಾಕ್ಟರ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾದ (ಎಸ್‌ಇಎ) ಅಧ್ಯಕ್ಷ ಅತುಲ್‌ ಚತುರ್ವೇದಿ ಪ್ರತಿಕ್ರಿಯೆ ನೀಡಿದ್ದಾರೆ.

ಅತಿ ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡುವ ಭಾರತಕ್ಕೆ ಅಷ್ಟೇ ಅಲ್ಲದೆ, ಜಾಗತಿಕವಾಗಿಯೂ ಬಳಕೆದಾರರ ಮೇಲೆ ತೀವ್ರ ಪರಿಣಾಮ ಉಂಟುಮಾಡಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಭಾರತವು ವಾರ್ಷಿಕವಾಗಿ 85 ಲಕ್ಷ ಟನ್‌ಗಳಷ್ಟು ತಾಳೆ ಎಣ್ಣೆ ಆಮದು ಮಾಡಿಕೊಳ್ಳುತ್ತಿದ್ದು ಇದರಲ್ಲಿ ಅರ್ಧದಷ್ಟನ್ನು ಇಂಡೊನೇಷ್ಯಾದಿಂದ
ತರಿಸಿಕೊಳ್ಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT