ಚಿಲ್ಲರೆ ಹಣದುಬ್ಬರ ನಿರಂತರ ಏರಿಕೆ

ಬುಧವಾರ, ಜೂಲೈ 17, 2019
24 °C

ಚಿಲ್ಲರೆ ಹಣದುಬ್ಬರ ನಿರಂತರ ಏರಿಕೆ

Published:
Updated:

ನವದೆಹಲಿ: ಜೂನ್‌ ತಿಂಗಳಲ್ಲಿನ ಚಿಲ್ಲರೆ ಹಣದುಬ್ಬರವು ಶೇ 3.18ರಷ್ಟಾಗಿದ್ದು, ಇದು ಕಳೆದ 6 ತಿಂಗಳಲ್ಲಿನ ಗರಿಷ್ಠ ಮಟ್ಟವಾಗಿದೆ.

ಧಾನ್ಯ, ಬೇಳೆಕಾಳು ಮತ್ತು ಮಾಂಸ, ಮೀನುಗಳ ಬೆಲೆ ದುಬಾರಿಯಾಗಿರುವುದರಿಂದ ಹಣದುಬ್ಬರ ಹೆಚ್ಚಳವಾಗಿದೆ. ಗ್ರಾಹಕರ ಬೆಲೆ ಸೂಚ್ಯಂಕ ಆಧರಿಸಿದ (ಸಿಪಿಐ) ಚಿಲ್ಲರೆ ಹಣದುಬ್ಬರವು ಮೇ ತಿಂಗಳಲ್ಲಿ ಶೇ 3.05ರಷ್ಟಿತ್ತು.  ವರ್ಷದ ಹಿಂದಿನ ಇದೇ ಅವಧಿಯಲ್ಲಿ ಶೇ 4.92ಕ್ಕೆ ತಲುಪಿತ್ತು. ಈ ವರ್ಷದ ಜನವರಿಯಿಂದೀಚೆಗೆ ಹಣದುಬ್ಬರವು ಏರುಗತಿಯಲ್ಲಿ ಇದೆ.

ಕೈಗಾರಿಕಾ ಉತ್ಪಾದನೆ ಕುಸಿತ: ಮೇ ತಿಂಗಳ ಕೈಗಾರಿಕಾ ಉತ್ಪಾದನೆಯು ಶೇ 3.1ರಷ್ಟಕ್ಕೆ ಕುಂಠಿತಗೊಂಡಿದೆ. ತಯಾರಿಕಾ ಕ್ಷೇತ್ರದ 23 ವಲಯಗಳ ಪೈಕಿ 11 ವಲಯಗಳ ಪ್ರಗತಿ ಇಳಿಕೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !