ಶನಿವಾರ, ಮೇ 15, 2021
22 °C

ಚಿನ್ನದ ಇಟಿಎಫ್: 2020–21ರಲ್ಲಿ ₹ 6,900 ಕೋಟಿ ಹೂಡಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್‌–19 ಸಾಂಕ್ರಾಮಿಕದ ಕಾರಣದಿಂದಾಗಿ ಹೂಡಿಕೆದಾರರು ಸುರಕ್ಷಿತ ಹೂಡಿಕೆ ಮಾರ್ಗವಾದ ಚಿನ್ನದೆಡೆಗೆ ಗಮನ ಹರಿಸುವಂತಾಗಿದೆ. 2020–21ರಲ್ಲಿ ಚಿನ್ನದ ವಿನಿಮಯ ವಹಿವಾಟು ನಿಧಿಗಳಲ್ಲಿ (ಇಟಿಎಫ್‌) ಹೂಡಿಕೆದಾರರು ₹ 6,900 ಕೋಟಿ ಹೂಡಿಕೆ ಮಾಡಿದ್ದಾರೆ.

ಹಿಂದಿನ ಹಣಕಾಸು ವರ್ಷದಲ್ಲಿ (2019–20) ಆಗಿದ್ದ ಹೂಡಿಕೆಗೆ ಹೋಲಿಸಿದರೆ ನಾಲ್ಕು ಪಟ್ಟಿಗಿಂತಲೂ ಹೆಚ್ಚು ಹೂಡಿಕೆ 2020–21ರಲ್ಲಿ ಆಗಿದೆ. 2019–20ರಲ್ಲಿ ₹ 1,614 ಕೋಟಿ ಹೂಡಿಕೆ ಆಗಿತ್ತು.

ಚಿನ್ನದ ಇಟಿಎಫ್‌ ನಿರ್ವಹಣಾ ಸಂಪತ್ತು ಮೌಲ್ಯವು ಈ ವರ್ಷದ ಮಾರ್ಚ್‌ ಅಂತ್ಯಕ್ಕೆ ಶೇಕಡ 78ರಷ್ಟು ಹೆಚ್ಚಾಗಿದ್ದು ₹ 14,123 ಕೋಟಿಗೆ ತಲುಪಿದೆ. 2020ರ ಮಾರ್ಚ್ ಅಂತ್ಯದ ವೇಳೆಗೆ ಇದು ₹ 7,949 ಕೋಟಿ ಆಗಿತ್ತು.

ನಿಶ್ಚಿತ ಠೇವಣಿಗಳ ಬಡ್ಡಿದರ ಕಡಿಮೆ ಇರುವುದೂ ಜನ ಚಿನ್ನದ ಮೇಲೆ ಹೂಡಿಕೆ ಮಾಡಲು ಒಂದು ಕಾರಣ ಎಂದು ಮಾರ್ಕೆಟ್‌ ಪಲ್ಸ್‌ನ ಅಧಿಕಾರಿ ಅರ್ಶದ್‌ ಫಾಹೌಮ್ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು