ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐ.ಟಿ. ಪೋರ್ಟಲ್‌ ಸಮಸ್ಯೆ: ಕೇಂದ್ರ ಹಣಕಾಸು ಸಚಿವಾಲಯಕ್ಕೆ ಇನ್ಫೊಸಿಸ್‌ ಸಿಇಒ ಭೇಟಿ

Last Updated 23 ಆಗಸ್ಟ್ 2021, 8:42 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಹಣಕಾಸು ಸಚಿವಾಲಯಕ್ಕೆ ಇನ್ಫೊಸಿಸ್‌ ಸಿಇಒ ಸಲೀಲ್‌ ಪಾರೇಖ್‌ ಅವರು ಸೋಮವಾರ ಭೇಟಿ ನೀಡಿದ್ದಾರೆ.

ಹೊಸ ಐ.ಟಿ. ಪೋರ್ಟಲ್‌ನಲ್ಲಿ ತಾಂತ್ರಿಕ ದೋಷಗಳು ಮುಂದುವರಿದಿರುವ ಬಗ್ಗೆ ವಿವರಣೆ ನೀಡುವಂತೆ ಕೇಂದ್ರ ಹಣಕಾಸು ಸಚಿವಾಲಯವು ಇನ್ಫೊಸಿಸ್‌ ಸಿಇಒ ಸಲೀಲ್‌ ಪಾರೇಖ್‌ ಅವರಿಗೆ ಆದೇಶಿಸಿತ್ತು.

ಸತತ ಎರಡು ದಿನಗಳಿಂದ ಪೋರ್ಟಲ್‌ ಬಳಕೆಗೆ ಲಭ್ಯವಾಗದ ಹಿನ್ನೆಲೆಯಲ್ಲಿ ಸಚಿವಾಲಯವು ಈ ಸೂಚನೆ ನೀಡಿತ್ತು.

ಪೋರ್ಟಲ್‌ ಸಮಸ್ಯೆ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಸಲೀಲ್‌ ಪಾರೇಖ್‌ ವಿವರಣೆ ನೀಡಲಿದ್ದಾರೆ.

ಐ.ಟಿ. ವಿವರ ಸಲ್ಲಿಸಲು ಇನ್ಫೊಸಿಸ್‌ ಅಭಿವೃದ್ಧಿಪಡಿಸಿರುವ www.incometax.gov.in ಪೋರ್ಟಲ್‌ ಅನ್ನು ಜೂನ್‌7ರಂದು ಬಿಡುಗಡೆ ಮಾಡಲಾಗಿತ್ತು. ಆ ದಿನದಿಂದಲೂ ಒಂದಲ್ಲ ಒಂದು ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಲೇ ಇವೆ. ಈ ಕಾರಣದಿಂದಾಗಿ ಆದಾಯ ತೆರಿಗೆ ಇಲಾಖೆಯು ಮ್ಯಾನುಯಲ್‌ ಫೈಲಿಂಗ್‌ಗೆ ಅವಕಾಶ ನೀಡಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT