ನವದೆಹಲಿ: ಐ.ಟಿ. ಕ್ಷೇತ್ರದ ಪ್ರಮುಖ ಕಂಪನಿಯಾದ ಇನ್ಫೊಸಿಸ್‌ನ ನಿವ್ವಳ ಲಾಭದ ಪ್ರಮಾಣವು ಮಾರ್ಚ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಶೇಕಡ 17.5ರಷ್ಟು ಹೆಚ್ಚಳ ಆಗಿದೆ. ಅಲ್ಲದೆ, ಪ್ರತಿ ಷೇರಿಗೆ ₹ 1,750ರಂತೆ ಗರಿಷ್ಠ ₹ 9,200 ಕೋಟಿ ಮೌಲ್ಯದ ಷೇರುಗಳನ್ನು ಮರು ಖರೀದಿ ಮಾಡುವುದಾಗಿ ಘೋಷಣೆ ಮಾಡಿದೆ.

ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿಯು ಒಟ್ಟು ₹ 5,076 ಕೋಟಿ ಲಾಭ ಗಳಿಸಿದೆ. 2020ರ ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿಯ ಲಾಭವು ₹ 4,321 ಕೋಟಿ ಆಗಿತ್ತು.

2021ರ ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿಯ ಆದಾಯದಲ್ಲಿ ಶೇ 13.1ರಷ್ಟು ಹೆಚ್ಚಳ ಆಗಿದೆ. ಮಾರ್ಚ್ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಕಂಪನಿಯು ಒಟ್ಟು ₹ 19,351 ಕೋಟಿ ಲಾಭ ಗಳಿಸಿದೆ.

ಷೇರು ಮರುಖರೀದಿ ಮಾತ್ರವೇ ಅಲ್ಲದೆ, ಪ್ರತಿ ಷೇರಿಗೆ ₹ 15ರಂತೆ, ₹ 6,400 ಕೋಟಿಯನ್ನು ಅಂತಿಮ ಡಿವಿಡೆಂಡ್ ರೂಪದಲ್ಲಿ ಷೇರುದಾರರಿಗೆ ಮರಳಿಸುವ ಶಿಫಾರಸನ್ನು ಕಂಪನಿಯ ಆಡಳಿತ ಮಂಡಳಿಯು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.