ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹1 ಲಕ್ಷ ಕೋಟಿ ತಲುಪಿದ 'ಇಂಟರ್‌ಗ್ಲೋಬ್‌' ಮಾರುಕಟ್ಟೆ ಮೌಲ್ಯ

Published 29 ಜೂನ್ 2023, 16:27 IST
Last Updated 29 ಜೂನ್ 2023, 16:27 IST
ಅಕ್ಷರ ಗಾತ್ರ

ನವದೆಹಲಿ: ಇಂಡಿಗೊ ಕಂಪನಿಯ ಮಾತೃಸಂಸ್ಥೆ 'ಇಂಟರ್‌ಗ್ಲೋಬ್‌' ಏವಿಯೇಷನ್‌ನ ಮಾರುಕಟ್ಟೆ ಬಂಡವಾಳ ಮೌಲ್ಯವು ಬುಧವಾರದ ವಹಿವಾಟಿನಲ್ಲಿ ₹ 1 ಲಕ್ಷ ಕೋಟಿಯನ್ನು ತಲುಪಿದೆ. ಈ ಮೈಲಿಗಲ್ಲು ಸಾಧಿಸಿದ ದೇಶದ ಮೊದಲ ವಿಮಾನಯಾನ ಕಂಪನಿ ಎನ್ನುವ ಹೆಗ್ಗಳಿಕೆಗೆ ಅದು ಪಾತ್ರವಾಗಿದೆ.

ಬುಧವಾರದ ವಹಿವಾಟಿನಲ್ಲಿ ಬಿಎಸ್‌ಇನಲ್ಲಿ ಕಂಪನಿಯ ಷೇರು ಮೌಲ್ಯ ಶೇ 3.55ರಷ್ಟು ಹೆಚ್ಚಾಗಿ ಪ್ರತಿ ಷೇರಿನ ಬೆಲೆ ₹1,629ಕ್ಕೆ ತಲುಪಿತು. ಎನ್‌ಎಸ್‌ಇನಲ್ಲಿ ₹2,621ಕ್ಕೆ ತಲುಪಿತು.

ಬಿಎಸ್‌ಇನಲ್ಲಿ ಕಂಪನಿಯ ಮಾರುಕಟ್ಟೆ ಮೌಲ್ಯವು 1.01 ಲಕ್ಷ ಕೋಟಿಗೆ ಏರಿಕೆ ಕಂಡಿತು. ಈ ವರ್ಷದಲ್ಲಿ ಈವರೆಗೆ ಕಂಪನಿಯು ಷೇರು ಮೌಲ್ಯದಲ್ಲಿ ಶೇ 20.53ರಷ್ಟು ಏರಿಕೆ ಕಂಡಿದೆ.

ಇಂಡಿಗೊ ಸದ್ಯ ದೇಶದ ಅತಿದೊಡ್ಡ ದೇಶಿ ವಿಮಾನಯಾನ ಕಂಪನಿ ಆಗಿದ್ದು, ಅಂತರರಾಷ್ಟ್ರೀಯ ಕಾರ್ಯಾಚರಣೆಯನ್ನೂ ವಿಸ್ತರಿಸುತ್ತಿದೆ. ಮೇ ತಿಂಗಳಿನಲ್ಲಿ ಕಂಪನಿಯ ದೇಶಿ ಮಾರುಕಟ್ಟೆಯ ಪಾಲು ಶೇ 61.4ರಷ್ಟು ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT