ಬೆಂಗಳೂರು: ಫೆಬ್ರುವರಿ 12ರಿಂದ 14ರವರೆಗೆ ಅಂತರರಾಷ್ಟ್ರೀಯ ಕಾಫಿ ಉತ್ಸವ (ಇಂಡಿಯಾ ಇಂಟರ್ನ್ಯಾಷನಲ್ ಕಾಫಿ ಫೆಸ್ಟಿವಲ್–2026) ನಗರದ ಜಯಮಹಲ್ ಪ್ಯಾಲೆಸ್ನಲ್ಲಿ ನಡೆಯಲಿದೆ.

ಸ್ಪೆಷಾಲ್ಟಿ ಕಾಫಿ ಅಸೋಸಿಯೇಷನ್ ಆಫ್ ಇಂಡಿಯಾ (ಎಸ್ಸಿಇಐ) ಕಾರ್ಯಕ್ರಮವನ್ನು ಆಯೋಜಿಸಿದೆ. ಭಾರತೀಯ ಕಾಫಿ ಮಂಡಳಿಯು ಕಾರ್ಯಕ್ರಮಕ್ಕೆ ಬೆಂಬಲ ನೀಡಿದೆ ಎಂದು ಕಾಫಿ ಮಂಡಳಿಯ ಪ್ರಕಟಣೆ ತಿಳಿಸಿದೆ.

ಈ ಕಾರ್ಯಕ್ರಮಕ್ಕೆ 20 ಸಾವಿರಕ್ಕೂ ಹೆಚ್ಚು ಜನ ಭೇಟಿ ನೀಡುವ ನಿರೀಕ್ಷೆ ಇದೆ. ಕಾಫಿ ಬೆಳೆಗಾರರು, ರಫ್ತುದಾರರು, ರೋಸ್ಟರ್ಗಳು, ಉಪಕರಣ ತಯಾರಕರು, ಕಾಫಿ ಬ್ರ್ಯಾಂಡ್ಗಳು, ಬ್ಯಾರಿಸ್ಟಾಗಳು ಹಾಗೂ ಗ್ರಾಹಕರನ್ನು ಇದು ಒಂದೇ ವೇದಿಕೆಗೆ ಕರೆತರಲಿದೆ ಎಂದು ತಿಳಿಸಿದೆ.

‘ಭಾರತದ ಕಾಫಿಯು ತನ್ನ ಗುಣಮಟ್ಟ ಮತ್ತು ವೈವಿಧ್ಯತೆಯಿಂದಾಗಿ ಹೆಚ್ಚಿನ ಮಾನ್ಯತೆ ಪಡೆಯುತ್ತಿದೆ. ಅಂತರರಾಷ್ಟ್ರೀಯ ಕಾಫಿ ಉತ್ಸವದಂತಹ ವೇದಿಕೆಗಳು ಉತ್ಪಾದಕರನ್ನು ಮಾರುಕಟ್ಟೆಗಳೊಂದಿಗೆ ಬೆಸೆಯುವಲ್ಲಿ, ದೇಸಿ ಬಳಕೆ ಮತ್ತು ರಫ್ತಿಗೆ ಬೆಂಬಲ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ’ ಎಂದು ಭಾರತೀಯ ಕಾಫಿ ಮಂಡಳಿಯ ಸಿಇಒ ಮತ್ತು ಕಾರ್ಯದರ್ಶಿ ಕೂರ್ಮಾ ರಾವ್ ಎಂ. ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.