ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ಇಟಿಎಫ್‌ನ: ಅಕ್ಟೋಬರ್‌ನಲ್ಲಿ ₹841 ಕೋಟಿ ಹೂಡಿಕೆ

Published 10 ನವೆಂಬರ್ 2023, 13:29 IST
Last Updated 10 ನವೆಂಬರ್ 2023, 13:29 IST
ಅಕ್ಷರ ಗಾತ್ರ

ನವದೆಹಲಿ: ಅನಿಶ್ಚಿತ ಸಂದರ್ಭಗಳಲ್ಲಿ ಚಿನ್ನದ ಮೇಲಿನ ಹೂಡಿಕೆ ಹೆಚ್ಚು ಸುರಕ್ಷಿತ ಎನ್ನುವ ಭಾವನೆ ಹೂಡಿಕೆದಾರರಲ್ಲಿ ಇದೆ. ಹೀಗಾಗಿ ಅಕ್ಟೋಬರ್‌ನಲ್ಲಿ ಚಿನ್ನದ ವಿನಿಮಯ ವಹಿವಾಟು ನಿಧಿಗಳಲ್ಲಿ (ಚಿನ್ನದ–ಇಟಿಎಫ್‌) ಹೂಡಿಕೆ ಮಾಡಲು ಹೆಚ್ಚು ಗಮನ ಹರಿಸುತ್ತಿದ್ದಾರೆ ಭಾರತೀಯ ಮ್ಯೂಚುವಲ್ ಫಂಡ್‌ ಕಂಪನಿಗಳ ಒಕ್ಕೂಟ (ಎಎಂಎಫ್ಐ) ಶುಕ್ರವಾರ ಹೇಳಿದೆ.

ಹೂಡಿಕೆದಾರರು ಅಕ್ಟೋಬರ್‌ನಲ್ಲಿ ಚಿನ್ನದ ಇಟಿಎಫ್‌ಗಳಲ್ಲಿ ₹841 ಕೋಟಿಯಷ್ಟು ಬಂಡವಾಳ ಹೂಡಿಕೆ ಮಾಡಿದ್ದಾರೆ. ಸೆಪ್ಟೆಂಬರ್‌ನಲ್ಲಿ ಹೂಡಿಕೆ ಮಾಡಿದ್ದ ₹175 ಕೋಟಿ ಹೋಲಿಸಿದರೆ ಹೂಡಿಕೆಯಲ್ಲಿ ಗರಿಷ್ಠ ಹೆಚ್ಚಳ ಕಂಡಬಂದಿದೆ ಎಂದು ಒಕ್ಕೂಟವು ಮಾಹಿತಿ ನೀಡಿದೆ.

ಧನ್‌ತೇರಸ್‌ ಖರೀದಿಯು ಶುಕ್ರವಾರ ಉತ್ತಮ ಆರಂಭ ಪಡೆದುಕೊಂಡಿದ್ದು, ಒಟ್ಟಾರೆ ಮಾರಾಟವು ಕಳೆದ ಬಾರಿಗಿಂತಲೂ ಹೆಚ್ಚಿಗೆ ಇರುವ ನಿರೀಕ್ಷೆಯನ್ನು ಉದ್ಯಮ ವಲಯ ವ್ಯಕ್ತಪಡಿಸಿದೆ.

‘ಸದ್ಯ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಜಾಗತಿಕ ಬಿಕ್ಕಟ್ಟುಗಳು, ಅಮೆರಿಕದಲ್ಲಿ ಬಡ್ಡಿದರ ಇನ್ನಷ್ಟು ಏರಿಕೆ ಆಗುವ ಆತಂಕ, ಹಣದುಬ್ಬರವು ನಿರೀಕ್ಷೆಗಿಂತಲೂ ಹೆಚ್ಚಿಗೆ ಇರುವುದು ಮತ್ತು ಜಾಗತಿಕ ಆರ್ಥಿಕತೆಯ ಮಂದಗತಿಯ ಬೆಳವಣಿಗೆ... ಹೀಗೆ ಹಲವು ಕಾರಣಗಳು ಚಿನ್ನದ ಮೇಲೆ ಹೂಡಿಕೆ ಹೆಚ್ಚಾಗುವಂತೆ ಮಾಡುತ್ತಿವೆ’ ಎಂದು ಮಾರ್ನಿಂಗ್‌ಸ್ಟಾರ್ ಇನ್‌ವೆಸ್ಟ್‌ಮೆಂಟ್ ಅಡ್ವೈಸರ್ ಇಂಡಿಯಾದ ವಿಶ್ಲೇಷಕರ ಮೆಲ್ವಿನ್‌ ಸಾಂಟರಿಟಾ ಹೇಳಿದ್ದಾರೆ.

‘ಚಿನ್ನದ ಬೆಲೆಯು ಈಚಿನ ದಿನಗಳಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ತುಸು ಕಡಿಮೆ ಆಗಿದೆ. ಇದು ಸಹ ಖರೀದಿ ಅವಕಾಶವನ್ನು ಒದಗಿಸಿಕೊಟ್ಟಿದೆ’ ಎಂದು ಅವರು ತಿಳಿಸಿದ್ದಾರೆ.

ಏಪ್ರಿಲ್‌–ಜೂನ್‌ ಅವಧಿಯಲ್ಲಿ ಚಿನ್ನದ ಇಟಿಎಫ್‌ನಲ್ಲಿ ₹298 ಕೋಟಿ ಹೂಡಿಕೆ ಆಗಿದೆ. ಮಾರ್ಚ್‌ ತ್ರೈಮಾಸಿಕದಲ್ಲಿ ₹1,243 ಕೋಟಿ, ಡಿಸೆಂಬರ್‌ ತ್ರೈಮಾಸಿಕದಲ್ಲಿ ₹320 ಕೊಟಿ ಮತ್ತು ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ₹165 ಕೋಟಿ ಬಂಡವಾಳವನ್ನು ಹೂಡಿಕೆದಾರರು ಹಿಂದಕ್ಕೆ ಪಡೆದಿದ್ದಾರೆ.

ಹೂಡಿಕೆದಾರರ ಖಾತೆಯು ಅಕ್ಟೋಬರ್‌ನಲ್ಲಿ 27,700 ಹೆಚ್ಚಾಗಿದ್ದು, ಒಟ್ಟು ಖಾತೆಗಳ ಸಂಖ್ಯೆಯು 48.34 ಲಕ್ಷಕ್ಕೆ ತಲುಪಿದೆ. ಸೆಪ್ಟೆಂಬರ್‌ ಅಂತ್ಯಕ್ಕೆ ಒಟ್ಟು ಖಾತೆಗಳ ಸಂಖ್ಯೆ 48.06 ಲಕ್ಷ ಇತ್ತು ಎಂದು ಒಕ್ಕೂಟವು ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT