ನವದೆಹಲಿ: ಚಿನ್ನದ ವಿನಿಮಯ ವಹಿವಾಟು ನಿಧಿಗಳಲ್ಲಿ (ಇಟಿಎಫ್) ಆಗಸ್ಟ್‌ನಲ್ಲಿ ₹ 24 ಕೋಟಿ ಬಂಡವಾಳ ಹೂಡಿಕೆ ಆಗಿದೆ. ಜುಲೈನಲ್ಲಿ ಹೊರಹರಿವು ಕಂಡುಬಂದಿತ್ತು.
ಪ್ರಸಕ್ತ ವರ್ಷದ ಜನವರಿ–ಆಗಸ್ಟ್ ಅವಧಿಯಲ್ಲಿ ಒಟ್ಟಾರೆ ಒಳಹರಿವು ₹ 3,070 ಕೋಟಿಗಳಷ್ಟಾಗಿದೆ ಎಂದು ಭಾರತೀಯ ಮ್ಯೂಚುವಲ್ ಫಂಡ್ ಕಂಪನಿಗಳ ಒಕ್ಕೂಟ (ಎಎಂಎಫ್‌ಐ) ಮಾಹಿತಿ ನೀಡಿದೆ.
2019ರ ಆಗಸ್ಟ್‌ನಿಂದಲೂ ಚಿನ್ನದ ಇಟಿಎಫ್‌ನಲ್ಲಿ ಬಂಡವಾಳ ಒಳಹರಿವು ನಿಧಾನವಾಗಿ ಹೆಚ್ಚಾಗುತ್ತಲೇ ಇತ್ತು. ಆದರೆ, 2020ರ ಫೆಬ್ರುವರಿಯಲ್ಲಿ ₹ 195 ಕೋಟಿ, ನವೆಂಬರ್‌ನಲ್ಲಿ ₹ 141 ಕೋಟಿ, ಹಾಗೂ 2021ರ ಜುಲೈನಲ್ಲಿ 61.5 ಕೋಟಿಗಳಷ್ಟು ಬಂಡವಾಳ ಹೊರಹರಿವು ಕಂಡುಬಂದಿತ್ತು.
ಕೋವಿಡ್ ಸಾಂಕ್ರಾಮಿಕದ ಕುರಿತಾದ ಆತಂಕದ ಹೊರತಾಗಿಯೂ ಒಟ್ಟಾರೆಯಾಗಿ ಜಾಗತಿಕ ಮುನ್ನೋಟವುಸಕಾರಾತ್ಮಕವಾಗಿರುವುದು ಚಿನ್ನದ ಮೇಲಿನ ಹೂಡಿಕೆಯನ್ನು ಹೆಚ್ಚಾಗುವಂತೆ ಮಾಡಿದೆ ಎಂದು ಮಾರ್ನಿಂಗ್‌ಸ್ಟಾರ್ ಇಂಡಿಯಾದ ಹಿರಿಯ ವಿಶ್ಲೇಷಕಿ ಕವಿತಾ ಕೃಷ್ಣನ್ ಹೇಳಿದ್ದಾರೆ.
ಚಿನ್ನದ ಇಟಿಎಫ್‌ಗಳ ನಿರ್ವಹಣಾ ಸಂಪತ್ತು ಮೌಲ್ಯವು ಜುಲೈನ ಅಂತ್ಯಕ್ಕೆ ₹ 16,750 ಕೋಟಿಗಳಷ್ಟು ಇದ್ದಿದ್ದು ಆಗಸ್ಟ್ ತಿಂಗಳ ಅಂತ್ಯಕ್ಕೆ ₹ 16,350 ಕೋಟಿಗಳಿಗೆ ಇಳಿಕೆ ಆಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.