ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಮರುಪಾವತಿಗೆ ಕ್ರೆಡಿಟ್ ಕಾರ್ಡ್ ಬಳಕೆ ಬೇಡ

ವಿಮಾ ಕಂಪನಿಗಳಿಗೆ ಐಆರ್‌ಡಿಎಐ ಆದೇಶ
Published 9 ಮೇ 2023, 14:10 IST
Last Updated 9 ಮೇ 2023, 14:10 IST
ಅಕ್ಷರ ಗಾತ್ರ

ಬೆಂಗಳೂರು: ವಿಮಾ ಪಾಲಿಸಿ ಆಧರಿಸಿ ಸಾಲ ಪಡೆದವರಿಗೆ ಇನ್ನು ಮುಂದೆ, ಸಾಲದ ಕಂತು ಕಟ್ಟಲು ಕ್ರೆಡಿಟ್ ಕಾರ್ಡ್ ಬಳಕೆಗೆ ಅವಕಾಶ ಸಿಗುವ ಸಾಧ್ಯತೆ ಕಡಿಮೆ.

ದೇಶದ ವಿಮಾ ವಲಯದ ನಿಯಂತ್ರಣ ಪ್ರಾಧಿಕಾರವಾಗಿರುವ ‘ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ’ವು (ಐಆರ್‌ಡಿಎಐ) ವಿಮಾ ಪಾಲಿಸಿ ಆಧರಿಸಿದ ಸಾಲಗಳ ಮರುಪಾವತಿ ಸಂದರ್ಭದಲ್ಲಿ, ಕ್ರೆಡಿಟ್ ಕಾರ್ಡ್ ಬಳಕೆಗೆ ಅಂತ್ಯ ಹೇಳಬೇಕು ಎಂದು ಸಲಹೆ ಮಾಡಿದೆ.

ಐಆರ್‌ಡಿಎಐ ಈ ಆದೇಶವನ್ನು ಈ ತಿಂಗಳ ಮೊದಲ ವಾರದಲ್ಲಿ ಹೊರಡಿಸಿದೆ. ಆದೇಶದಲ್ಲಿ ಪ್ರಾಧಿಕಾರವು, ‘ಸಲಹೆ’ ಎಂಬ ಪದ ಬಳಸಿದ್ದರೂ, ಆದೇಶದಲ್ಲಿರುವ ಸೂಚನೆಯು ತಕ್ಷಣದಿಂದ ಅನ್ವಯವಾಗುತ್ತದೆ ಎಂದು ಎಲ್ಲ ವಿಮಾ ಕಂಪನಿಗಳಿಗೆ ಹೇಳಿದೆ.‌

ವಿಮಾ ಪಾಲಿಸಿ ಆಧರಿಸಿ ಸಾಲ ಪಡೆಯುವುದು ತುಸು ಸಲೀಸಿನ ಪ್ರಕ್ರಿಯೆ ಎಂದು ತಜ್ಞರು ಹೇಳುತ್ತಾರೆ. ಇದರಲ್ಲಿ ಅಡಮಾನವಾಗಿ ಯಾವುದೇ ಆಸ್ತಿಯನ್ನು ಇರಿಸಬೇಕಾಗಿಲ್ಲ. ವಿಮಾ ಪಾಲಿಸಿ ಆಧರಿಸಿದ ಸಾಲಗಳಿಗೆ ಶೇಕಡ 10ರಿಂದ ಶೇ 12ರಷ್ಟು ಬಡ್ಡಿ ಇರುತ್ತದೆ. ಇದು ವೈಯಕ್ತಿಕ ಸಾಲಗಳಿಗೆ ಇರುವ ಬಡ್ಡಿಯ ಪ್ರಮಾಣಕ್ಕಿಂತ ಕಡಿಮೆ.

ಕ್ರೆಡಿಟ್ ಕಾರ್ಡ್ ಮೂಲಕ ಇಂತಹ ಸಾಲ ಮರುಪಾವತಿ ಮಾಡುವುದನ್ನು ನಿಷೇಧಿಸುವ ತೀರ್ಮಾನವು ಒಳ್ಳೆಯ ನಡೆ, ಇದರಿಂದಾಗಿ ಇಂತಹ ಸಾಲ ಪಡೆದವರು ಸಾಲದ ಸುಳಿಗೆ ಸಿಲುಕುವುದು ತಪ್ಪುತ್ತದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಪಾಲಿಸಿ ಆಧರಿಸಿದ ಸಾಲಗಳಿಗೆ ವಿಧಿಸುವ ಬಡ್ಡಿಯು ಕಡಿಮೆ ಇರುತ್ತದೆ. ಹೀಗಾಗಿ, ಈ ಸಾಲವನ್ನು ತೀರಿಸಲು ಕ್ರೆಡಿಟ್ ಕಾರ್ಡ್‌ನ ಬಳಕೆಯು ಸೂಕ್ತವಾಗುವುದಿಲ್ಲ’ ಎಂದು ಕೋಟಕ್ ಮಹೀಂದ್ರ ಲೈಫ್ ಇನ್ಶುರೆನ್ಸ್ ಕಂಪನಿಯ ಅಧಿಕಾರಿ ಸುನಿಲ್ ಶರ್ಮ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT