ಕಷ್ಟಕಾಲದಲ್ಲಿ ಯಾವತ್ತೂ ಕೈಬಿಡದ ಚಿನ್ನದ ಬೆಲೆ ಮತ್ತೆ ಏರುಮುಖವಾಗಿದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆಯು ಏಪ್ರಿಲ್ 1ರ ನಂತರ 10 ಗ್ರಾಂಗೆ ₹ 3 ಸಾವಿರಕ್ಕಿಂತ ಹೆಚ್ಚು ಏರಿಕೆ ಕಂಡಿದೆ.

ಹಾಗಾದರೆ, ಚಿನ್ನದ ಬೆಲೆ ಈ ರೀತಿ ಏರಿಕೆ ಆಗುತ್ತಿರುವುದಕ್ಕೆ ಕಾರಣ ಏನು? ಈ ಪ್ರಶ್ನೆಗೆ ಮಾರುಕಟ್ಟೆಯನ್ನು ಅರಿತವರು ಕೆಲವು ಕಾರಣಗಳನ್ನು ನೀಡುತ್ತಾರೆ. ‘ಕೋವಿಡ್–19 ಸಾಂಕ್ರಾಮಿಕ ವೇಗವಾಗಿ ಹರಡುತ್ತಿರುವುದು, ರೂಪಾಯಿ ಮೌಲ್ಯ ಇಳಿಕೆ ಹಾಗೂ ಆರ್ಥಿಕ ಬೆಳವಣಿಗೆಯ ಕುರಿತ ಅನಿಶ್ಚಿತತೆಯು ಚಿನ್ನದ ಬೆಲೆ ಹೆಚ್ಚಳಕ್ಕೆ ಕಾರಣ’ ಎಂಬುದು ಒಂದು ವಿವರಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.