ಭಾನುವಾರ, ಜುಲೈ 3, 2022
24 °C

ತಮಿಳುನಾಡಿನಲ್ಲಿ ₹ 400 ಕೋಟಿ ಕಪ್ಪು ಆದಾಯ ಪತ್ತೆ: ಐಟಿ ಇಲಾಖೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ತಮಿಳುನಾಡಿನಲ್ಲಿ ನಡೆಸಿದ ದಾಳಿಯಲ್ಲಿ ಸುಮಾರು ₹ 400 ಕೋಟಿ ಬೃಹತ್ ಪ್ರಮಾಣದ ಬಹಿರಂಗಪಡಿಸದ ಆದಾಯ ಮತ್ತು ಕಡಲಾಚೆಯ ವಹಿವಾಟು ಪತ್ತೆಯಾಗಿದೆ ಎಂದು ಐಟಿ ಇಲಾಖೆ ಹೇಳಿದೆ.

ದೊಡ್ಡ ಪ್ರಮಾಣದ ಲೆಕ್ಕವಿಲ್ಲದ ಹಣವನ್ನು ವಿದೇಶಿ ಸಂಸ್ಥೆಗಳ ಜೊತೆ ವಹಿವಾಟು ನಡೆಸಿರುವ ವ್ಯಕ್ತಿಗಳ ಮೇಲೆ ದಾಳಿ ಮತ್ತು ಅವರ ಸಂಬಂಧಿತ ಬ್ಯಾಂಕ್ ಖಾತೆಗಳ ಪರಿಶೀಲನೆ ನಡೆಸಿದಾಗ ‘ಲೆಕ್ಕವಿಲ್ಲದ’ ₹ 50 ಲಕ್ಷ ನಗದು, 3 ಕೋಟಿ ಮೌಲ್ಯದ ಆಭರಣಗಳು ಮತ್ತು ₹ 12.5 ಕೋಟಿ ಮೌಲ್ಯದ ಒಂಬತ್ತು ಐಷಾರಾಮಿ ವಾಹನಗಳು ಪತ್ತೆಯಾಗಿವೆ" ಎಂದು ಐಟಿ ಇಲಾಖೆ ತಿಳಿಸಿದೆ.

"ಕೃಷಿ ಸರಕುಗಳ ಮಾರಾಟ ಮತ್ತು ಖರೀದಿಯ ಸೋಗಿನಲ್ಲಿ ವಿವಿಧ ಘಟಕಗಳ ಮೂಲಕ ₹ 100 ಕೋಟಿಗಿಂತ ಹೆಚ್ಚಿನ ಹಣವನ್ನು ಸಂಗ್ರಹಿಸಲಾಗಿದೆ ಎಂದು ಶೋಧದ ಸಂದರ್ಭದಲ್ಲಿ ಕಂಡುಬಂದ ಸಾಕ್ಷ್ಯಗಳು ಬಹಿರಂಗಪಡಿಸಿವೆ. ಈ ಘಟಕಗಳ ಕೃಷಿ ಸಂಬಂಧಿತ ಯಾವುದೇ ಚಟುವಟಿಕೆಗಳು ಅಸ್ತಿತ್ವದಲ್ಲಿಲ್ಲ ಮತ್ತು ಯಾವುದೇ ಸ್ಟಾಕ್ ಕಂಡುಬಂದಿಲ್ಲ ಎಂದು ಐಟಿ ಇಲಾಖೆ ಹೇಳಿದೆ.

"ನಕಲಿ ಮಾರಾಟ ಮತ್ತು ಖರೀದಿ ಇನ್‌ವಾಯ್ಸ್‌ಗಳನ್ನು ಅವರ ಉದ್ಯೋಗಿಗಳೇ ತಯಾರಿಸಿರುವುದು ಕಂಡುಬಂದಿದೆ" ಎಂದು ಸಿಬಿಡಿಟಿ ಹೇಳಿದೆ.

ಬ್ಯಾಂಕ್ ಸಾಲಗಳನ್ನು ಪಡೆಯಲು ವಹಿವಾಟು ತೋರಿಸಲು ಮಾರಾಟ ಮತ್ತು ಸ್ಟಾಕ್ ಕುರಿತಂತೆ ನಕಲಿ ದಾಖಲೆ ಸೃಷ್ಟಿಸಲಾಗಿದೆ ಎಂದು ಅದು ಹೇಳಿದೆ.

"ದಾಳಿ ವೇಳೆ ಕಂಡು ಬಂದ ಈ ಘಟಕಗಳು ಇಲ್ಲಿಯವರೆಗೆ ಯಾವುದೇ ಟ್ಯಾಕ್ಸ್ ರಿಟರ್ನ್ ಸಲ್ಲಿಸಿಲ್ಲ. ವಿದೇಶಿ ಘಟಕದಿಂದ ಡಿಬೆಂಚರ್ ಮೂಲಕ ₹ 150 ಕೋಟಿ ಪಡೆದಿದ್ದಾರೆ, ಶೋಧದ ಸಮಯದಲ್ಲಿ ಕಂಡುಬಂದ ಸಾಕ್ಷ್ಯಗಳು ಇದೊಂದು ಶಾಮ್ ವಹಿವಾಟು ಮತ್ತು ಎಲ್ಲ ಹಣ ಆ ವ್ಯಕ್ತಿಗಳ ವೈಯಕ್ತಿಕ ಖಾತೆಗಳಿಗೆ ಹೋಗಿದೆ " ಎಂದು ಸಿಬಿಡಿಟಿ ಹೇಳಿದೆ.

ಇದರ ಜೊತೆಗೆ ಈ ಘಟಕಗಳು ಮಸಾಲೆ ಪದಾರ್ಥಗಳನ್ನು ಸಹ ಆಮದು ಮಾಡಿಕೊಂಡಿವೆ, ಅದರ ಆಮದು ವೆಚ್ಚ ಸುಮಾರು ₹ 25 ಕೋಟಿ ಎಂದು ಇಲಾಖೆ ತಿಳಿಸಿದೆ.

"ಈ ಮೂಲಕ, ಹಣವನ್ನು ಭಾರತದಿಂದ ಹೊರಗೆ ಕಳುಹಿಸಲಾಗಿದ್ದು, ಇತರ ದೇಶಗಳಲ್ಲಿನ ಅವರ ವೈಯಕ್ತಿಕ ಖಾತೆಗಳಿಗೆ ಜಮಾ ಮಾಡಲಾಗಿದೆ.

ದಾಳೆ ವೇಳೆ, ಚೆನ್ನೈನ ಪ್ರಮುಖ ಸ್ಥಳಗಳು ಮತ್ತು ತಮಿಳುನಾಡಿನ ಇತರ ಪಟ್ಟಣಗಳಲ್ಲಿ ಕಳೆದ 3-4 ವರ್ಷಗಳಲ್ಲಿ ಹಲವಾರು ಸ್ಥಿರಾಸ್ತಿಗಳನ್ನು ಸರ್ಕಲ್ ದರಗಳಿಗಿಂತ ಕಡಿಮೆ ಮೌಲ್ಯದಲ್ಲಿ ಖರೀದಿಸಲಾಗಿರುವುದು ಕಂಡು ಬಂದಿದೆ. ಈ ಹಲವು ಆಸ್ತಿಗಳನ್ನು ಟ್ಯಾಕ್ಸ್ ರಿಟರ್ನ್ಸ್‌ನಲ್ಲಿ ಬಹಿರಂಗಪಡಿಸಲಾಗಿಲ್ಲ.

"ಶೋಧದ ಸಮಯದಲ್ಲಿ 25 ಕ್ಕೂ ಹೆಚ್ಚು ಐಷಾರಾಮಿ ಕಾರುಗಳು ಪತ್ತೆಯಾಗಿವೆ. ಅವುಗಳಲ್ಲಿ ಹಲವು ಲೆಕ್ಕದಲ್ಲಿಲ್ಲ. ಬಹಿರಂಗಪಡಿಸದ ವಿದೇಶಿ ಬ್ಯಾಂಕ್ ಖಾತೆಗಳು, ವಿದೇಶಿ ಕ್ರೆಡಿಟ್ ಕಾರ್ಡ್‌ಗಳು ಮತ್ತು ವಿದೇಶಿ ಸಂಸ್ಥೆಗಳಲ್ಲಿ ಹೂಡಿಕೆಗಳ ಬಗ್ಗೆ ಪುರಾವೆಗಳು ಕಂಡುಬಂದಿವೆ" ಎಂದು ಹೇಳಿಕೆ ತಿಳಿಸಿದೆ.

ಶೋಧದಲ್ಲಿ ಈವರೆಗೆ ಸುಮಾರು ₹ 400 ಕೋಟಿ ಬಹಿರಂಗಪಡಿಸದ ಆದಾಯ ಪತ್ತೆಮಾಡಲಾಗಿದೆ. ಕಪ್ಪು ಹಣ ವಿರೋಧಿ ಕಾಯ್ದೆಯಡಿ ತನಿಖೆ ನಡೆಸಲಾಗುವುದು ಎಂದು ಅದು ಹೇಳಿದೆ.

 

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು