ಬುಧವಾರ, ಮೇ 25, 2022
29 °C

2020–21 ಐಟಿಆರ್‌ ಇ–ವೆರಿಫಿಕೇಷನ್‌: ಫೆಬ್ರುವರಿ 28ರವರೆಗೆ ಅವಕಾಶ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: 2020–21ನೇ ಅಂದಾಜು ವರ್ಷಕ್ಕೆ ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಕೆಯ (ಐಟಿಆರ್‌) ಆನ್‌ಲೈನ್‌ ದೃಢೀಕರಣ (ಇ–ವೇರಿಫಿಕೇಷನ್‌) ಮಾಡದೇ ಇರುವ ತೆರಿಗೆದಾರರಿಗೆ 2022ರ ಫೆಬ್ರುವರಿ 28ರ ಒಳಗಾಗಿ ಆ ಪ್ರಕ್ರಿಯೆ ಪೂರ್ಣಗೊಳಿಸುವ ಅವಕಾಶ ನೀಡಲಾಗಿದೆ.

ಆದಾಯ ತೆರಿಗೆ ಕಾಯ್ದೆಯ ಪ್ರಕಾರ, ಡಿಜಿಟಲ್‌ ಹಸ್ತಾಕ್ಷರ ಇಲ್ಲದೇ ವಿದ್ಯುನ್ಮಾನ ಮಾರ್ಗದ ಮುಲಕ ಐಟಿಆರ್‌ ಸಲ್ಲಿಸಿದರೆ 120 ದಿನಗಳ ಒಳಗಾಗಿ ಆಧಾರ್ ಒಟಿಪಿ ಅಥವಾ ನೆಟ್‌ ಬ್ಯಾಂಕಿಂಗ್ ಅಥವಾ ಡಿಮ್ಯಾಟ್‌ ಖಾತೆಗೆ ಬರುವ ಕೋಡ್‌ ಬಳಸಿ ಅಥವಾ ಎಟಿಎಂ ಮೂಲಕ ಇ–ವೇರಿಫಿಕೇಷನ್‌ ಮಾಡಬೇಕು. ಇದಲ್ಲದೆ, ಐಟಿಆರ್ ಸಲ್ಲಿಸಿದ ಪ್ರತಿಯನ್ನು ಬೆಂಗಳೂರಿನಲ್ಲಿ ಇರುವ ಕೇಂದ್ರೀಯ ಪರಿಶೀಲನಾ ಕೇಂದ್ರಕ್ಕೆ (ಸಿಪಿಸಿ) ಕಳುಹಿಸುವ ಮೂಲಕವೂ ದೃಢೀಕರಿಸಬಹುದಾಗಿದೆ.

ಇ–ವೇರಿಫಿಕೇಷನ್‌ ಪ್ರಕ್ರಿಯೆ ಪೂರ್ಣಗೊಳ್ಳದೇ ಇದ್ದಲ್ಲಿ ರಿಟರ್ನ್ಸ್‌ ಸಲ್ಲಿಕೆ ಆಗಿದೆ ಎಂದು ಇಲಾಖೆಯು ಪರಿಗಣಿಸುವುದಿಲ್ಲ.

ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯು (ಸಿಬಿಡಿಟಿ) ಮಂಗಳವಾರ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, 2020–21ನೇ ಅಂದಾಜು ವರ್ಷಕ್ಕೆ (2019–20ನೇ ಹಣಕಾಸು ವರ್ಷ) ವಿದ್ಯುನ್ಮಾನ ರೂಪದಲ್ಲಿ ಸಲ್ಲಿಕೆ ಆಗಿರುವ ಬಹಳಷ್ಟು ಐಟಿಆರ್‌ಗಳ ಇ–ವೇರಿಫಿಕೇಷನ್‌ ಆಗಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು