ತೆರಿಗೆ ವಿವರ ಸಲ್ಲಿಸಲು ಹೊಸ ಪೋರ್ಟಲ್
ನವದೆಹಲಿ: ಆದಾಯ ತೆರಿಗೆ ವಿವರಗಳನ್ನು ಅಂತರ್ಜಾಲದ ಮೂಲಕ ಸಲ್ಲಿಸಲು ನೆರವಾಗುವ ಹೊಸ ಪೋರ್ಟಲ್ಗೆ ಆದಾಯ ತೆರಿಗೆ ಇಲಾಖೆಯು ಜೂನ್ ಆರಂಭದಲ್ಲಿ ಚಾಲನೆ ನೀಡುವ ಸಾಧ್ಯತೆ ಇದೆ.
ಈಗ ಇರುವ ಪೋರ್ಟಲ್ಅನ್ನು ಜೂನ್ 1ರಿಂದ 6ರವರೆಗೆ ಸ್ಥಗಿತಗೊಳಿಸಲಾಗುತ್ತದೆ. ಹೊಸ ಪೋರ್ಟಲ್ ಈಗಿನ ಪೋರ್ಟಲ್ಗಿಂತ ಹೆಚ್ಚು ಬಳಕೆದಾರ ಸ್ನೇಹಿ ಆಗಿರಲಿದೆ ಎಂದು ತೆರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಈಗಿರುವ www.incometaxindiaefiling.gov.in ಪೋರ್ಟಲ್ನಿಂದ ಹೊಸ www.incometaxgov.in ಪೋರ್ಟಲ್ಗೆ ಬದಲಾಗುವ ಪ್ರಕ್ರಿಯೆಯು ಜೂನ್ 7ರ ಮೊದಲು ಪೂರ್ಣವಾಗಲಿದೆ ಎಂದು ಇಲಾಖೆಯ ಆದೇಶವೊಂದರಲ್ಲಿ ಹೇಳಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.