ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐ.ಟಿ: ಸದ್ಯಕ್ಕೆ ಸುಧಾರಿಸದು ನೇಮಕಾತಿ- ರೇಟಿಂಗ್‌ ಸಂಸ್ಥೆ

Published 4 ಡಿಸೆಂಬರ್ 2023, 15:51 IST
Last Updated 4 ಡಿಸೆಂಬರ್ 2023, 15:51 IST
ಅಕ್ಷರ ಗಾತ್ರ

ಮುಂಬೈ: ದೇಶದ ಮಾಹಿತಿ ತಂತ್ರಜ್ಞಾನ (ಐ.ಟಿ) ಉದ್ಯಮಕ್ಕೆ ಜಾಗತಿಕ ಮಟ್ಟದಲ್ಲಿ ಬೇಡಿಕೆ ಕಡಿಮೆ ಆಗಿದೆ. ಹೀಗಾಗಿ ಮುಂದಿನ 2–3 ತ್ರೈಮಾಸಿಕಗಳವರೆಗೂ ಹೊಸ ನೇಮಕವು ನಿಧಾನಗತಿಯಲ್ಲಿ ಸಾಗಲಿದೆ ಎಂದು ರೇಟಿಂಗ್‌ ಸಂಸ್ಥೆ ಐಸಿಆರ್‌ಎ ಸೋಮವಾರ ಹೇಳಿದೆ. 

ಅಮೆರಿಕ ಮತ್ತು ಯುರೋಪ್‌ನಂತಹ ದೊಡ್ಡ ಮಾರುಕಟ್ಟೆಗಳು ಹಲವು ರೀತಿಯ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿವೆ. ಇದು ಭಾರತದ ಐ.ಟಿ. ಉದ್ಯಮದ ಬೇಡಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದೆ.

‌ಬೇಡಿಕೆ ಕಡಿಮೆ ಆಗಿರುವುದರಿಂದ ಕಂಪನಿಗಳು ಹೊಸ ನೇಮಕಕ್ಕೆ ಮುಂದಾಗುತ್ತಿಲ್ಲ. ಇರುವ ಸಿಬ್ಬಂದಿ ಸಾಮರ್ಥ್ಯವನ್ನೇ ಬಳಸಿಕೊಂಡು ಸಾಮರ್ಥ್ಯವನ್ನು ಸುಧಾರಿಸಿಕೊಳ್ಳಲು ಗಮನ ಹರಿಸುತ್ತಿವೆ ಎಂದು ಸಂಸ್ಥೆಯು ಹೇಳಿದೆ.

2022–23ನೇ ಹಣಕಾಸು ವರ್ಷದಲ್ಲಿ ಉದ್ಯಮವು ಶೇ 9.2ರಷ್ಟು ಬೆಳವಣಿಗೆ ಕಂಡಿದೆ. ಆದರೆ, ಬೇಡಿಕೆ ಕಡಿಮೆ ಆಗಿರುವುದರಿಂದ ಪ್ರಸಕ್ತ ಹಣಕಾಸು ವರ್ಷದಲ್ಲಿ ವರಮಾನದ ಬೆಳವಣಿಗೆಯು ಶೇ 3–5ರಷ್ಟು ಆಗುವ ಅಂದಾಜು ಮಾಡಲಾಗಿದೆ. 2024–25ನೇ ಹಣಕಾಸು ವರ್ಷದ ವೇಳೆಗೆ ಶೇ 6ರವರೆಗೆ ಏರಿಕೆ ಆಗುವ ನಿರೀಕ್ಷೆ ಇದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT